ರಾಷ್ಟ್ರೀಯ ಹಬ್ಬಗಳ ಘನತೆ ಎತ್ತಿ ಹಿಡಿಯೋಣ: ಶಾಸಕ ಸಿದ್ದು ಸವದಿ
Jan 17 2024, 01:47 AM ISTತೇರದಾಳ: ಪಟ್ಟಣದ ಪುರಸಭೆಯಲ್ಲಿ 74ನೇ ಗಣರಾಜ್ಯೋತ್ಸವ ಪ್ರಯುಕ್ತ ಹಮ್ಮಿಕೊಂಡ ಪೂರ್ವಭಾವಿ ಸಭೆ ಮಂಗಳವಾರ ಶಾಸಕ ಸಿದ್ದು ಸವದಿ ನೇತೃತ್ವದಲ್ಲಿ ನಡೆಯಿತು. ಈ ವೇಳೆ ಮಾತನಾಡಿದ ಶಾಸಕರು, ರಾಷ್ಟ್ರೀಯ ಹಬ್ಬಗಳಲ್ಲಿ ವಿಷಯದಲ್ಲಿ ಯಾವುದೇ ಅಧಿಕಾರಿಗಳು ನಿರ್ಲಕ್ಷ್ಯ ಮಾಡಕೂಡದು. ಎಲ್ಲರೂ ಅತ್ಯಂತ ಸಡಗರ, ಸಂಭ್ರಮ, ಗೌರವಾದಗಳಿಂದ ಹಬ್ಬದ ರೀತಿಯಲ್ಲಿ ಆಚರಿಸಬೇಕು ಎಂದು ಹೇಳಿದರು.