ಬೀದಿ ದೀಪಗಳಿಗೆ ಶಾಸಕ ಭೀಮಸೇನ ಚಿಮ್ಮನಕಟ್ಟಿ ಚಾಲನೆ

Jan 14 2024, 01:37 AM IST
ಬಾದಾಮಿ: ಸಮೀಪದ ಬನಶಂಕರಿ ದೇವಸ್ಥಾನಕ್ಕೆ ತೆರಳುವ 5 ಕಿ.ಮೀ ರಸ್ತೆಯ ಇಕ್ಕೆಲುಗಳಲ್ಲಿ ಹಾಕಲಾಗಿರುವ ಬೀದಿ ದೀಪಗಳಿಗೆ ಶಾಸಕ ಭೀಮಸೇನ ಚಿಮ್ಮನಕಟ್ಟಿ ಶುಕ್ರವಾರ ಸಂಜೆ ಚಾಲನೆ ನೀಡಿದರು.ಜ.25ರಂದು ಸುಪ್ರಸಿದ್ಧ ಬಾದಾಮಿ-ಬನಶಂಕರಿದೇವಿ ಜಾತ್ರೆ ಹಿನ್ನೆಲೆಯಲ್ಲಿ ಇತ್ತೀಚೆಗೆ ಜರುಗಿದ ಜಾತ್ರಾ ಪೂರ್ವಭಾವಿ ಸಭೆಯಲ್ಲಿ ಬೀದಿ ದೀಪಗಳನ್ನು ಕೂಡಲೇಹಾಕಬೇಕು. ಭಕ್ತಾಧಿಗಳಿಗೆ ಬೆಳಕಿನ ವ್ಯವಸ್ಥೆ ಮಾಡಬೇಕೆಂದು ಸೂಚನೆ ನೀಡಿದ್ದರು. ಲೋಕೋಪಯೋಗಿ ಇಲಾಖೆಯ ₹ 2 ಕೋಟಿ ವೆಚ್ಚದಲ್ಲಿ 20 ಹೈಮಾಸ್ಟ್, 150 ಬೀದಿದೀಪಗಳನ್ನು ನಗರದ ಅಂಬೇಡ್ಕರ್‌ ವೃತ್ತದಿಂದ ಹಾದಿಮನಿ ಪೆಟ್ರೋಲ್ ಬಂಕ್‌ವರೆಗೆ ಬನಶಂಕರಿ ದೇವಸ್ಥಾನಕ್ಕೆ ತೆರಳುವ ಪಾದಯಾತ್ರಿಗಳಿಗೆ ಸಂಚರಿಸಲು ಅನಕೂಲವಾಗಲಿದೆ.