ಹೆಲ್ಮೆಟ್, ಸೀಟ್ ಬೆಲ್ಟ್ ಧರಿಸಿ ಜೀವ ರಕ್ಷಣೆ ಮಾಡಿಕೊಳ್ಳಿ: ಶಾಸಕ ಎಚ್.ವೈ. ಮೇಟಿ
Jan 09 2024, 02:00 AM ISTಬಾಗಲಕೋಟೆ: ವಿದ್ಯಾಗಿರಿಯ ಕಾಲೇಜು ವೃತ್ತದಲ್ಲಿ ಆಯೋಜಿಸಿದ್ದ 10 ಪೊಲೀಸ್ ದ್ವಿಚಕ್ರ ವಾಹನ ಲೋಕಾರ್ಪಣೆ ಹಾಗೂ ಹೆಲ್ಮೆಟ್ ಕಡ್ಡಾಯ ಅಭಿಯಾನ ಪ್ರಯುಕ್ತ ಉಚಿತ ಹೆಲ್ಮೆಟ್ ವಿತರಣೆ ಸಮಾರಂಭವನ್ನು ಶಾಸಕ ಎಚ್.ವೈ. ಮೇಟಿ ಚಾಲನೆ ನೀಡಿದರು. ಮಾಧ್ಯಮದವರಿಗೆ ಹಾಗೂ ಸಾರ್ವಜನಿಕರಿಗೆ ಸಾಂಕೇತಿಕವಾಗಿ ಹೆಲ್ಮೆಟ್ ವಿತರಿಸಲಾಯಿತು. ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಹಾಂತೇಶ್ವರ ಜಿಡ್ಡಿ, ಡಿಎಸ್ಪಿಗಳಾದ ಪಂಪನಗೌಡ, ಪ್ರಭು ಪಾಟೀಲ ಇತರರು ಉಪಸ್ಥಿತರಿದ್ದರು.