ಗುಂಡ್ಲುಪೇಟೆಯಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಶಾಸಕ, ಡೀಸಿ ಚಾಲನೆ
Jan 07 2024, 01:30 AM ISTಪಟ್ಟಣದ ಪುರಸಭೆ ಆಯೋಜಿಸಿದ್ದ ನಮ್ಮ ನಡೆ ಸ್ವಚ್ಛ ಗುಂಡ್ಲುಪೇಟೆ ಕಡೆ ಎಂಬ ಸ್ವಚ್ಛತಾ ಅಭಿಯಾನಕ್ಕೆ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್, ಜಿಲ್ಲಾಧಿಕಾರಿ ಶಿಲ್ಪಾನಾಗ್ ಚಾಲನೆ ನೀಡಿದರು. ಪಟ್ಟಣದ ನೆಹರು ಪಾರ್ಕ್ ಆವರಣದಲ್ಲಿ ನಮ್ಮ ನಡೆ ಸ್ವಚ್ಛ ಗುಂಡ್ಲುಪೇಟೆ ಕಡೆ ಅಭಿಯಾನದ ಅಂಗವಾಗಿ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹಾಗೂ ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ಗಿಡ ನೆಡುವ ಮೂಲಕ ಗುಂಡ್ಲುಪೇಟೆ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿದರು. ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಮಾತನಾಡಿ, ಪಟ್ಟಣದ ಸ್ವಚ್ಛತೆಯಾಗಿದ್ದರೆ ಪರಿಸರ ಹಾಗೂ ಜನರ ಆರೋಗ್ಯವೂ ಚೆನ್ನಾಗಿ ಇರಲಿದೆ. ಅಶುಚಿತ್ವಕ್ಕೆ ದಾರಿ ಮಾಡಿಕೊಟ್ಟರೆ ರೋಗ, ರುಜಿನಗಳು ಬರಲಿವೆ. ಪಟ್ಟಣದ ಸ್ವಚ್ಛತೆಗೆ ನಾಗರೀಕರು ಪ್ರಥಮ ಆದ್ಯತೆ ನೀಡಬೇಕು ಎಂದರು.