• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಖಾಸಗಿ ವ್ಯಾಮೋಹ ಬಿಟ್ಟು ಸರ್ಕಾರಿ ಶಾಲೆಗಳಲ್ಲೇ ಓದಿ: ಮಧು

Mar 12 2024, 02:06 AM IST
ಮಾಜಿ ಮುಖ್ಯಮಂತ್ರಿ ದಿ. ಎಸ್. ಬಂಗಾರಪ್ಪ ಮತ್ತು ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಖಾಸಗಿ ಶಾಲೆಯಲ್ಲಿ ಶಿಕ್ಷಣ ಪಡೆದಿಲ್ಲ. ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿ, ರಾಜ್ಯದ ಉನ್ನತ ಸ್ಥಾನಗಳನ್ನು ಅಲಂಕರಿಸಿದ್ದಾರೆ. ಅದೇ ರೀತಿ ವಿದ್ಯಾರ್ಥಿಗಳು ಖಾಸಗಿ ಶಾಲೆ ವ್ಯಾಮೋಹ ಬಿಟ್ಟು, ಸರ್ಕಾರಿ ಶಾಲೆಗಳಲ್ಲಿ ಶ್ರದ್ಧೆಯಿಂದ ವ್ಯಾಸಂಗ ಮಾಡಿದರೆ ಉತ್ತಮ ಹುದ್ದೆಗಳ ಪಡೆಯಬಹುದು ಎಂದು ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಶಿಕಾರಿಪುರದಲ್ಲಿ ಹೇಳಿದ್ದಾರೆ.

ಸರ್ಕಾರಿ ಯೋಜನೆ ಅರ್ಜಿಗಳನ್ನು ಆದ್ಯತೆಯಲ್ಲಿ ಪರಿಗಣಿಸಲು ಸಿಇಒ ಸೂಚನೆ

Mar 12 2024, 02:05 AM IST
ಮಂಗಳೂರು ನಗರದ ಜಿಪಂ ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ಸಮಾಲೋಚನಾ ಸಮಿತಿ ಹಾಗೂ ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿ ಸಭೆ ನಡೆಯಿತು. ಜಿ.ಪಂ. ಸಿಇಒ ಪಾಲ್ಗೊಂಡು ಮಾತನಾಡಿ ಸರ್ಕಾರಿ ಯೋಜನೆಯ ಅರ್ಜಿಗಳನ್ನು ಆದ್ಯತೆಯಲ್ಲಿ ಪರಿಗಣಿಸುವಂತೆ ಸೂಚನೆ ನೀಡಿದರು.

ಸರ್ಕಾರಿ ವೈದ್ಯರ ಯಡವಟ್ಟು; ಹದಗೆಟ್ಟ ಮಹಿಳೆಯ ಆರೋಗ್ಯ

Mar 11 2024, 01:23 AM IST
ಆಸ್ಪತ್ರೆಗೆ ದಾಖಲಿಸಿಕೊಂಡ ವೈದ್ಯರು ಶಸ್ತ್ರ ಚಿಕಿತ್ಸೆ ನಿರ್ವಹಿಸುವ ವೇಳೆ ರೋಗಿಯ ಬಗ್ಗೆ ಹೆಚ್ಚಿನ ನಿಗಾವಹಿಸಬೇಕು. ವೈದ್ಯರ ನಿರ್ಲಕ್ಷ್ಯದಿಂದ ಈ ಬಡ ಮಹಿಳೆಯ ಪ್ರಾಣಕ್ಕೆ ಅಪಾಯ ಬಂದೊದಗಿದೆ, ಇವರ ಅಳಲು ಕೇಳುವವರು ಯಾರು? ಇದಕ್ಕೆಲ್ಲಾ ಸರ್ಕಾರಿ ಆಸ್ಪತ್ರೆಯ ವೈದ್ಯರೇ ಹೊಣೆಗಾರರಾಗಲಿದ್ದಾರೆಂದು ತಾಲೂಕು ಜೆಡಿಎಸ್‌ ರೈತ ಘಟಕದ ಅದ್ಯಕ್ಷ ಗಂಗಾಧರ್‌ ನಾಯ್ಡು ಆರೋಪಿಸಿದ್ದಾರೆ.

ಎಲ್ಲಾ ಸರ್ಕಾರಿ ನೌಕರರನ್ನು ಹಳೆ ಪಿಂಚಣಿ ವ್ಯವಸ್ಥೆಗೆ ಒಳಪಡಿಸಿ: ಡಾ.ಟಿ.ಎಂ.ದೇವರಾಜ್

Mar 11 2024, 01:23 AM IST
ನಿವೃತ್ತಿಯ ನಂತರ ಸರ್ಕಾರಿ ನೌಕರರ ಬದುಕಿಗೆ‌ ಭದ್ರತೆ ನೀಡಬೇಕಾದಲ್ಲಿ ಎಲ್ಲಾ ಸರ್ಕಾರಿ ನೌಕರರನ್ನು ಹಳೆಯ ಪಿಂಚಣಿ ವ್ಯವಸ್ಥೆಗೆ ಒಳಪಡಿಸಬೇಕೆಂದು ಸರ್ಕಾರಿ ಎನ್‌ಪಿಎಸ್ ನೌಕರರ ಸಂಘದ ಅಧ್ಯಕ್ಷ ಡಾ. ಟಿ ಎಂ ದೇವರಾಜ್ ತಿಳಿಸಿದ್ದಾರೆ.

ಸರ್ಕಾರಿ ನೌಕರರ ಆರೋಗ್ಯ ಹಿತದೃಷ್ಟಿಗೆ ಆರೋಗ್ಯ ಸಂಜೀವಿನಿ ಅನುಕೂಲ: ಶಾಸಕ ರಾಘವೇಂದ್ರ ಹಿಟ್ನಾಳ

Mar 11 2024, 01:18 AM IST
ಸರ್ಕಾರಿ ನೌಕರರಿಗೆ ಹಾಗೂ ಅವರ ಅವಲಂಬಿತ ಕುಟುಂಬದವರಿಗೆ ಜ್ಯೋತಿ ಸಂಜೀವಿನಿ ಯೋಜನೆಯ ಭಾಗ್ಯ ಎಲ್ಲರಿಗೂ ಲಭ್ಯ ಆಗಲಿ.

ನೂತನ ತಂತ್ರಜಜ್ಞಾನ, ಆವಿಷ್ಕಾರದಿಂದ ಮಹಿಳೆಯ ಪ್ರಗತಿ: ಸರ್ಕಾರಿ ಕಾಲೇಜಿನ ಯೋಗನರಸಿಂಹ

Mar 10 2024, 01:33 AM IST
ಸಂಸ್ಕೃತಿಯ ಪಾಲನೆ ಮತ್ತು ಇಂದಿನ ನೂತನ ಆವಿಷ್ಕಾರಗಳು ಮತ್ತು ತಂತ್ರಜ್ಞಾನದ ಬಳಕೆಯಿಂದ ಮಹಿಳೆಯರು ಸಂಘದ ಏಳಿಗೆ ಮತ್ತು ಕುಟುಂಬದ ಪ್ರಗತಿಗೆ ತೊಡಗಿಸಿಕೊಳ್ಳಬೇಕು ಎಂದು ಸರ್ಕಾರಿ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಎಚ್.ಕೆ.ಯೋಗನರಸಿಂಹ ಸಲಹೆ ನೀಡಿದರು. ಕುರುಹಿನಶೆಟ್ಟಿ ಮಹಿಳಾ ಸಮಾಜದ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು.

ಸರ್ಕಾರಿ ಶಾಲಾ ಮಕ್ಕಳಿಗೆ ಶಾಸಕ ಎಸ್‌.ಪಿ.ಸ್ವರೂಪ್‌ರಿಂದ ಸಮವಸ್ತ್ರ ವಿತರಣೆ

Mar 10 2024, 01:30 AM IST
ಹಾಸನದ ಶ್ರೀ ಆದಿಚುಂಚನಗಿರಿ ಶಾಖಾ ಮಠದ ಹಿಂಬಾಗದ ರವೀಂದ್ರ ನಗರ ಸರ್ಕಾರಿ ಶಾಲೆಯಲ್ಲಿ ಸಧ್ಭಕ್ತ ಬಳಗ ಹಾಗೂ ರೋಟರಿ ಕ್ಲಬ್ ಆಫ್ ಕ್ವಾಂಟಾ ವತಿಯಿಂದ ಆಯೋಜಿಸಿದ್ದ ಸಮವಸ್ತ್ರ ವಿತರಣಾ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಮಠದ ಸ್ವಾಮೀಜಿ ಜನ್ಮದಿನ ಪ್ರಯುಕ್ತ ಸಮವಸ್ತ್ರವನ್ನು ಶಾಸಕ ಎಚ್.ಪಿ. ಸ್ವರೂಪ್ ವಿತರಿಸಿದರು.

ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಕೀಳರಿಮೆ ಸಲ್ಲದು: ಝೀವಲ್‌ ಖಾನ್

Mar 09 2024, 01:32 AM IST
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗು ಭಾರತ ಜ್ಞಾನ ವಿಜ್ಞಾನ ಸಮಿತಿ ವತಿಯಿಂದ ಇಲ್ಲಿನ ಚನ್ನಬಸಪ್ಪ ಸಭಾಂಗಣದಲ್ಲಿ ‘ಮಕ್ಕಳ ಸಾಹಿತ್ಯ ಸಂಭ್ರಮ’ ಕಾರ್ಯಕ್ರಮದ ಸಮಾರೋಪ ಸಮಾರಂಭ ನಡೆಯಿತು.

ಕೇರಳದಲ್ಲಿ ದೇಶದ ಮೊದಲ ಸರ್ಕಾರಿ ಒಟಿಟಿ ಉದ್ಘಾಟನೆ

Mar 08 2024, 01:45 AM IST
ದೇಶದಲ್ಲೇ ಮೊದಲ ಬಾರಿಗೆ ಕೇರಳದಲ್ಲಿ ಸರ್ಕಾರಿ ಮಾಲೀಕತ್ವದ ಒಟಿಟಿ ವೇದಿಕೆ ‘ಸಿಸ್ಪೇಸ್‌’ ಅನ್ನು ಶುಕ್ರವಾರ ಲೋಕಾರ್ಪಣೆ ಮಾಡಲಾಗಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಇದನ್ನು ಉದ್ಘಾಟಿಸಿದರು.

ರಾಜ್ಯದ ಸರ್ಕಾರಿ ಆಸ್ಪತ್ರೆಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬದ್ಧ: ಸಚಿವ ದಿನೇಶ್ ಗುಂಡೂರಾವ್

Mar 08 2024, 01:45 AM IST
ಹೊಸ ಆಸ್ಪತ್ರೆ ಕಟ್ಟುವುದು ಸುಲಭ. ಆದರೆ, ವೈದ್ಯರು ಮತ್ತು ಸಿಬ್ಬಂದಿಯನ್ನು ನೇಮಿಸುವುದು ಕಷ್ಟ. ಮುಂದೆ ಹಲವು ಸವಾಲುಗಳಿವೆ. ಆರೋಗ್ಯ ಇಲಾಖೆಯಲ್ಲಿ ವೈದ್ಯರು, ಸಿಬ್ಬಂದಿ, ಶುಶ್ರೂಷಕರ, ಫಾರ್ಮಸಿಸ್ಟ್‌ಗಳ ಕೊರತೆಯಿದೆ. ಇವುಗಳನ್ನು ತುಂಬಲು ಮುಖ್ಯಮಂತ್ರಿಗಳ ಜೊತೆ ಚರ್ಚಿಸಿದ್ದು, ಮುಂದಿನ ದಿನಗಳಲ್ಲಿ ಕ್ರಮ ವಹಿಸಲಾಗುವುದು.
  • < previous
  • 1
  • ...
  • 165
  • 166
  • 167
  • 168
  • 169
  • 170
  • 171
  • 172
  • 173
  • ...
  • 197
  • next >

More Trending News

Top Stories
ಕಾಂತಾರ 1 ವಾಟರ್ ಕ್ಯಾನ್ ರಹಸ್ಯ ಬಿಚ್ಚಿಟ್ಟ ಅರವಿಂದ ಕಶ್ಯಪ್
ದರ್ಶನ್ ಚಿತ್ರ ದಿ ಡೆವಿಲ್‌ನಲ್ಲಿ ಬಿಗ್‌ಬಾಸ್‌ ಗಿಲ್ಲಿ ನಟ
ಅವಕಾಶದ ಹೆಸರಲ್ಲಿ ಪಲ್ಲಂಗಕ್ಕೆ ಕರೆಯುತ್ತಾರೆ : ಸಂಯುಕ್ತಾ ಹೆಗಡೆ
ಸಿದ್ದು ಎಷ್ಟು ಸಿಎಂ ಆಗಿರ್ತಾರೋ ಅಷ್ಟೂ ದಿನ ಅವ್ರೇ ಸಿಎಂ : ಡಿಕೆಸು
ಪ್ರತಿ ಕೆ.ಜಿ. ತುಪ್ಪ 90 ರು, ಬೆಣ್ಣೆ ದರ 28 ರು. ಹೆಚ್ಚಿಸಿದ ನಂದಿನಿ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved