ಕಾರೊಂದರಲ್ಲಿ ದಾಖಲೆ ಇಲ್ಲದ 99.20 ಲಕ್ಷ ರು. ಹಣ ಪತ್ತೆ: ವಶಕ್ಕೆ
Mar 19 2024, 12:49 AM ISTಬೆಂಗಳೂರು ಕಡೆಯಿಂದ ಬಂದ ಕಾರನ್ನು ಚೆಕ್ಪೋಸ್ಟ್ನಲ್ಲಿದ್ದ ಪೊಲೀಸರು ತಪಾಸಣೆಗೆ ಒಳಪಡಿಸಿದ್ದಾರೆ. ಈ ಸಮಯದಲ್ಲಿ ಡ್ಯಾಶ್ಬೋರ್ಡ್ನಲ್ಲಿ ಬ್ಯಾಗುಗಳಲ್ಲಿ ತುಂಬಿದ್ದ ಕಂತೆ ಕಂತೆ ಹಣ ಕಂಡುಬಂದಿದೆ. ಹಣದ ಸಂಬಂಧ ಕಾರಿನಲ್ಲಿದ್ದವರನ್ನು ವಿಚಾರಿಸಿದಾಗ ಸಾಗಿಸುತ್ತಿರುವ ಹಣಕ್ಕೆ ಸೂಕ್ತ ದಾಖಲೆಗಳನ್ನು ಒದಗಿಸಲಿಲ್ಲ ಎನ್ನಲಾಗಿದೆ. ಆ ಹಿನ್ನೆಲೆಯಲ್ಲಿ ಪೊಲೀಸರು ಹಣವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.