ಸಹಸ್ರಾರು ರೈತರಿಗೆ ಸೇರದ ಬೆಳೆ ಪರಿಹಾರ ಹಣ!
Mar 08 2024, 01:51 AM ISTರಾಮನಗರ: ಬರಗಾಲದಿಂದ ಬೆಳೆ ನಷ್ಟವಾಗಿರುವ ಪ್ರತಿ ರೈತರಿಗೆ ಸರ್ಕಾರ ಡಿಬಿಟಿ ಮೂಲಕ ನೇರವಾಗಿ ಖಾತೆಗೆ 2 ಸಾವಿರ ರು. ಬರ ಪರಿಹಾರವನ್ನು ನೀಡಲಿದೆ ಎಂದು ರಾಜ್ಯ ಸರ್ಕಾರ ಘೋಷಣೆ ಮಾಡಿತ್ತು. ಆದರೆ, ಘೋಷಣೆ ಮಾಡಿ ತಿಂಗಳುಗಳೇ ಕಳೆದರೂ ಜಿಲ್ಲೆಯ ಕೆಲ ರೈತರ ಕೈಗೆ ಇನ್ನೂ ಬೆಳೆ ಪರಿಹಾರದ ಹಣ ಸಿಕ್ಕಿಲ್ಲ.