ಶಿಕ್ಷಕರು ಸದೃಢರಾದರೆ ದೇಶದ ಅಭಿವೃದ್ಧಿ ಸಾಧ್ಯ
Jan 01 2024, 01:15 AM ISTದೇಶಕ್ಕೆ ಅನ್ನ ನೀಡುವ ರೈತ, ದೇಶಕ್ಕೆ ರಕ್ಷಣೆ ನೀಡುವ ಯೋಧರು ಹಾಗೂ ಮಕ್ಕಳಿಗೆ ಶಿಕ್ಷಣ ನೀಡುವ ಶಿಕ್ಷಕರು ಸದೃಢರಾದರೇ ಮಾತ್ರ ದೇಶ ಉತ್ತಮ ಅಭಿವೃದ್ಧಿ ಹೊಂದಲು ಸಾಧ್ಯವಿದೆ ಎಂದು ಮಹಾರಾಷ್ಟ್ರದ ಹಣೆಗಾಂವ್ ಮಠದ ಶಂಕರಲಿಂಗ ಶಿವಾಚಾರ್ಯರು ನುಡಿದರು.ಅವರು ದಿ. ಧಿರುಭಾಯಿ ಅಂಬಾನಿಯ ಜನ್ಮ ದಿನದ ನಿಮಿತ್ತ ತಾಲೂಕಿನ ಹಿಪ್ಪಳಗಾಂವ್ ಗ್ರಾಮದಲ್ಲಿ ರಿಲಾಯನ್ಸ್ ಫೌಂಡೇಷನ್, ಔಟ್ ರೀಚ್, ಸ್ಥಳೀಯ ಗ್ರಾಪಂ ಸಹಯೋಗದಲ್ಲಿ ಜರುಗಿದ 11ನೇ ರೈತ ಸಮ್ಮೇಳನದಲ್ಲಿ ಧೀರುಬಾಯಿ ಅಂಬಾನಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು