ಗುಂಡೂರಾವ್ ಪರಿಶ್ರಮದಿಂದ ಕುಶಾಲನಗರ ಅಭಿವೃದ್ಧಿ: ವಿ.ಪಿ.ಶಶಿಧರ್
Aug 23 2024, 01:09 AM ISTನಾಡು ಕಂಡ ಧೀಮಂತ ನಾಯಕ, ಗಂಡುಗಲಿ ಖ್ಯಾತಿಯ ಮಾಜಿ ಮುಖ್ಯಮಂತ್ರಿ ದಿ.ಆರ್.ಗುಂಡೂರಾವ್ ಪರಿಶ್ರಮದ ಫಲವಾಗಿ ಕುಶಾಲನಗರ ಅಭಿವೃದ್ಧಿಯ ನಾಗಾಲೋಟ ಕಾಣಲು ಸಾಧ್ಯವಾಯಿತು ಎಂದು ಕುಶಾಲನಗರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಹೇಳಿದ್ದಾರೆ. ಕುಶಾಲನಗರದ ಸಮಾನ ಮನಸ್ಕರ ವೇದಿಕೆ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ‘ಗುಂಡೂರಾವ್ ಪುಣ್ಯ ಸ್ಮರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.