ಒತ್ತಡರಹಿತ ಜೀವನದಿಂದ ಹೃದಯದ ಆರೋಗ್ಯ ಕಾಪಾಡಿ
Jul 30 2025, 12:45 AM ISTಸಂಪ್ರಾದಾಯಿಕ ಆಹಾರ ಪದ್ಧತಿಯ ಪಾಲನೆ ಜತೆಗೆ ಸಿದ್ಧ ಪಡಿಸಿದ ಆಹಾರದಿಂದ ದೂರ ಉಳಿಯುವುದು ಹಾಗೂ ದೈನಂದಿನ ಜೀವನದಲ್ಲಿ ಯೋಗ, ಪ್ರಾಣಾಯಾಮ, ವ್ಯಾಯಾಮ ಮತ್ತು ಒತ್ತಡ ರಹಿತವಾದ ಜೀವನವನ್ನು ರೂಪಿಸಿಕೊಂಡರೆ ಹೃದಯದ ಆರೋಗ್ಯವು ಉತ್ತಮವಾಗಿರುತ್ತದೆ ಎಂದು ತಹಸೀಲ್ದಾರ್ ವೈ.ಎಂ. ರೇಣುಕುಮಾರ್ ಸಲಹೆ ನೀಡಿದರು. ಮಾರಣಾಂತಿಕ ಕಾಯಿಲೆಯಾದ ಹೃದಯಾಘಾತ ತಡೆಯವ ಜತೆಗೆ ಉತ್ತಮ ಜೀವನ ಜೈಲಿ ಆಳವಡಿಸಿಕೊಳ್ಳಲು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಜಾಥಾ ನಡೆಯುತ್ತಿದೆ. ಜನರು ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢರಾಗಬೇಕು. ಪೌಷ್ಠಿಕ ಆಹಾರವನ್ನು ಸೇವಿಸಬೇಕು, ಮದ್ಯಪಾನ, ಧೂಮಪಾನ, ಮಾದಕ ವಸ್ತುಗಳಾದ ಡ್ರಗ್ಸ್ ಹಾಗೂ ಚಟಗಳಿಂದ ದೂರವಿರಬೇಕು ಎಂದು ಸಲಹೆ ನೀಡಿದರು.