ಆಹಾರ ಪ್ರಿಯರ ಆಕರ್ಷಿಸಿದ ಶೆಟ್ಟರ ಸಂತೆ
Jun 03 2024, 12:31 AM ISTವೈವಿಧ್ಯಮಯ ತಿಂಡಿ ತಿನಿಸು ಅಂದ್ರೆ ಯಾರಿಗೆ ತಾನೇ ಇಷ್ಟ ಇರಲ್ಲ ಹೇಳಿ. ಒಂದೇ ಸೂರಿನಡಿ ಎಲ್ಲಾದರೂ ಬೊಂಬಾಟ್ ತಿಂಡಿ ಸಿಗುತ್ತೆ ಅಂದ್ರೆ ಬಿಡೋದಕ್ಕಾಗುತ್ತಾ. ಅದರಲ್ಲೂ ಒಂದೇ ಸೂರಿನಡಿ ಎಲ್ಲಾದರೂ ಶೆಟ್ಟರ ಮನೆಯ ಬೊಂಬಾಟ್ ತಿಂಡಿ ಸಿಗುತ್ತೆ ಅಂದ್ರೆ ಇದಕ್ಕಿಂತ ತಿಂಡಿ ಪ್ರಿಯರಿಗೆ ಬೇರೇನು ಬೇಕು. ಇನ್ನು ಮನೆಯಲ್ಲಿ ತಯಾರಾದ ಬಟ್ಟೆ, ಬ್ಯಾಗು, ಚಕ್ಕುಲಿ ಕೋಡಬಳೆ, ನಿಪ್ಪಟ್ಟು, ನಿಪ್ಪಟ್ಟು ಮಸಾಲೆ, ಬೋಟಿ ಮಸಾಲೆ, ಪಾನಿಪುರಿ, ರವೆ ಉಂಡೆ ಸೇರಿ ಆರ್ಯವೈಶ್ಯರ ವಿಶಿಷ್ಟ ಖಾದ್ಯಗಳು ಮತ್ತಿತರೆ ತಿನಿಸುಗಳು ತಿಂಡಿ ಪ್ರಿಯರ ಕೈ ಬೀಸಿ ಕರೆಯುತ್ತಿದ್ದವು.