ಕಳೆದ ಅ.1ರಂದು 180 ಕ್ಷಿಪಣಿ ಬಳಸಿ ತನ್ನ ಮೇಲೆ ದಾಳಿ ನಡೆಸಿದ್ದಕ್ಕೆ ಪ್ರತೀಕಾರ ಕೈಗೊಳ್ಳಲು ಕಾಯುತ್ತಿದ್ದ ಇಸ್ರೇಲ್, ಶನಿವಾರ ಬೆಳ್ಳಂಬೆಳಗ್ಗೆ ಇರಾನ್‌ನ 20 ಆಯಕಟ್ಟಿನ ಪ್ರದೇಶಗಳ ಮೇಲೆ 100 ವಿಮಾನಗಳ ಮೂಲಕ 200 ಕ್ಷಿಪಣಿ ಬಳಸಿ ಭೀಕರ ‘ನಿರ್ದೇಶಿತ ವೈಮಾನಿಕ ದಾಳಿ’ ನಡೆಸಿದೆ.