ಕನ್ನಡ ಭಾಷೆ ಮಾತ್ರವಲ್ಲ, ಅದೊಂದು ಸಂಸ್ಕೃತಿ: ಸಿದ್ರಾಮಣ್ಣ
Feb 08 2024, 01:37 AM ISTಕನ್ನಡ ಒಂದು ಭಾಷೆ ಮಾತ್ರವಲ್ಲ, ಅದೊಂದು ಸಂಸ್ಕೃತಿ. ಅನೇಕ ವರ್ಷಗಳ ವಿಕಾಸವಾದ ಇದರಲ್ಲಿದೆ. ಬಳಕೆ ಮಾಡಿದ್ದು ಮಾತ್ರ ಉಳಿಯುತ್ತದೆ. ಬಳಕೆ ಮಾಡದಿದ್ದರೆ ಉಳಿಯುವುದಿಲ್ಲ. ಅದೇ ರೀತಿ ಕನ್ನಡವನ್ನು ಎಲ್ಲೆಲ್ಲಿ ಬಳಕೆ ಮಾಡಲು ಅವಕಾಶವಿದೆ ಎಂಬುದನ್ನು ತಿಳಿದು ಬಳಸಬೇಕು. ಕನ್ನಡ ಬಳಕೆಗೆ ಅವಕಾಶ ಇರುವುದು ಕರ್ನಾಟಕದಲ್ಲಿ. ಇದನ್ನು ಅರಿತು ಕನ್ನಡ ಬಳಸಬೇಕಿದೆ ಎಂದು ವಿಧಾನ ಪರಿಷತ್ತು ಮಾಜಿ ಸದಸ್ಯ ಆರ್.ಕೆ. ಸಿದ್ರಾಮಣ್ಣ ಶಿವಮೊಗ್ಗದಲ್ಲಿ ಹೇಳಿದ್ಧಾರೆ.