ಕನ್ನಡ ಎಲ್ಲ ಭಾಷೆಗಳಿಗಿಂತ ಶ್ರೀಮಂತ ಭಾಷೆ: ರಂಜಾನ್ ದರ್ಗಾ
Nov 20 2023, 12:45 AM ISTಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಉಪಾಧ್ಯಕ್ಷ ನಾಗರಾಜ್ ದೊಡ್ಡಮನಿ ಮಾತನಾಡಿ, ಕನ್ನಡ ನಾಡು, ನುಡಿ, ಸಂಸ್ಕೃತಿಯ ಕುರಿತ ಅರಿವು ಮೂಡಿಸಲು ಈ ವೇದಿಕೆ ರಚಿಸಲಾಯಿತು. ಇದು ಸಂಸ್ಥೆ ಅಲ್ಲ. ಪ್ರಸ್ತುತ ರಾಜ್ಯದಲ್ಲಿ ದೊಡ್ಡ ಕುಟುಂಬವಾಗಿ ವೇದಿಕೆ ಬೆಳೆದು ನಿಂತಿದೆ ಎಂದು ಹೇಳಿದರು.ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಜಿಲ್ಲಾಧ್ಯಕ್ಷೆ ಎಚ್.ಕೆ. ಹಸೀನಾ ಮಾತನಾಡಿ, ಸಮಾಜದಲ್ಲಿ ಸೌಹಾರ್ದತೆಯ ಬೇರು ಸದೃಢಗೊಳಿಸಲು ಈ ಕವಿ ಸಮ್ಮಿಲನ ಆಯೋಜಿಸಲಾಗಿದೆ. ಬಸವಣ್ಣ, ಕನಕದಾಸ ಸೇರಿದಂತೆ ಅನೇಕ ಮಹನಿಯರ ಆದರ್ಶದ ಹಾದಿಯಲ್ಲಿ ಎಲ್ಲರೂ ನಡೆಯಬೇಕು ಎಂಬುದು ನಮ್ಮ ಆಶಯ ಎಂದು ತಿಳಿಸಿದರು.