ಕೆರೆಗಳಲ್ಲಿ ಬಾವಿ, ಬೋರ್ ತೋಡಿದರೆ ಕ್ರಿಮಿನಲ್ ಕೇಸ್
Mar 06 2024, 02:20 AM ISTಇಂಡಿ: ಕೆರೆಗಳ ಪಕ್ಕದಲ್ಲಾಗಲಿ, ಕೆರೆಯಲ್ಲಾಗಲಿ ಬೋರ್‌ವೆಲ್ ಕೊರೆಸಿದರೆ ಹಾಗೂ ಬಾವಿ ತೋಡಿದರೆ ಅಂತವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುತ್ತದೆ ಎಂದು ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಎಚ್ಚರಿಕೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ ಮಾಹಿತಿ ನೀಡಿರುವ ಅವರು, ಈಗಾಗಲೆ 4 ಜನರ ಮೇಲೆ ಪ್ರಕರಣ ದಾಖಲಿಸಿದ್ದು, 8 ಮೋಟಾರ್ ಪಂಪ್‌ಸೆಟ್‌ಗಳನ್ನು ವಶಕ್ಕೆ ಪಡೆದಿದ್ದು, ಒಂದು ಬೋರ್‌ವೆಲ್ ಅನ್ನು ನಾಶ ಮಾಡಲಾಗಿದೆ. ಇನ್ನು ಮುಂದೆ ಸಾರ್ವಜನಿಕರು ಕೆರೆಯ ಸುತ್ತಮುತ್ತ ಮತ್ತು ಕೆರೆಗಳಲ್ಲಾಗಲಿ ಬೋರ್‌ವೆಲ್ ಇಲ್ಲವೆ ಬಾವಿ ತೋಡಿದರೆ ಕಾನೂನು ಕ್ರಮ ಕೈಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.