ಆಟೋದಲ್ಲಿ ಮಹಿಳೆ ಬಿಟ್ಟು ಹೋದ ಬ್ಯಾಗ್ ಮರಳಿಸಿದ ಚಾಲಕ
Oct 09 2023, 12:45 AM ISTಮಹಿಳಾ ಪ್ರಯಾಣಿಕರೊಬ್ಬರು ಆಟೋದಲ್ಲಿ ಬಿಟ್ಟು ಹೋಗಿದ್ದ ಚಿನ್ನಾಭರಣ ಹಾಗೂ ನಗದನ್ನು ಮಹಿಳೆಗೆ ವಾಪಸ್ ನೀಡಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕನ ಕಾರ್ಯಕ್ಕೆ ಮೆಚ್ಚಿ ಮುರುಡೇಶ್ವರ ಪೊಲೀಸರು ಸನ್ಮಾನಿಸಿದರು.ಕಾಯ್ಕಿಣಿಯ ಶಿರಾಣಿಯ ಚಂದ್ರು ರಾಮ ನಾಯ್ಕ ಎನ್ನುವವರ ಆಟೋದಲ್ಲಿ ಬಸ್ತಿ ಕಾಯ್ಕಿಣಿಯ ದೇವಿಕಾನಿನ ವಿಜಯಲಕ್ಷ್ಮಿ ಎಂಬಾಕೆ ಭಟ್ಕಳ ತೆಂಗಿನ ಗುಂಡಿಯಲ್ಲಿರುವ ತನ್ನ ತಾಯಿಯ ಮನೆಗೆ ಪ್ರಯಾಣಿಸುವ ವೇಳೆ ಚಿನ್ನಾಭರಣವುಳ್ಳ ಬ್ಯಾಗನ್ನು ಆಟೋದ ಹಿಂಭಾಗದಲ್ಲಿ ಬಿಟ್ಟು ತೆರಳಿದ್ದಳು.