ಬೆಳ್ತಂಗಡಿ: ಇನ್ನು ಬೆರಳ ತುದಿಯಲ್ಲೇ ಕಂದಾಯ ದಾಖಲೆ ಲಭ್ಯ
Aug 11 2025, 01:40 AM ISTಕಂದಾಯ ಇಲಾಖೆಯಲ್ಲಿ ಪ್ರತಿದಿನ ಹಲವಾರು ದಾಖಲೆಗಳು ಸೃಜನೆಯಾಗುತ್ತವೆ. ಈ ಪೈಕಿ ಆ ದಾಖಲೆಗಳನ್ನು ಎ ವರ್ಗ (ಶಾಶ್ವತ ದಾಖಲೆಗಳು) ಬಿ ವರ್ಗ (30 ವರ್ಷ) ಕಾಪಾಡುವಂತ ದಾಖಲೆಗಳು, ಸಿ ವರ್ಗ (10 ವರ್ಷ) ಕಾಪಾಡುವಂತ ದಾಖಲೆಗಳು, ಡಿ ವರ್ಗ (5 ವರ್ಷ), ಇ ವರ್ಗ (1) ವರ್ಷ ಕಾಪಾಡುವ ದಾಖಲೆಗಳೆಂದು ವರ್ಗೀಕರಣ ಮಾಡಿ ರೆಕಾರ್ಡ್ ರೂಮಿನಲ್ಲಿ ಇರಿಸಲಾಗುತ್ತದೆ. ಇವು ಕಾಲಕಳೆದಂತೆ ನಾಶವಾಗುವುದು, ಕಾಣೆಯಾಗುವುದು, ನಾದುರಸ್ತಿ ಆಗುತ್ತಿತ್ತು.