ರಾಜಸ್ಥಾನದಲ್ಲಿ ಪ್ರವಾಹಕ್ಕೆ 6 ಬಲಿ - ದಿಲ್ಲಿ ಭಾರಿ ಮಳೆಗೆ 9, ಬಿಹಾರದಲ್ಲಿ ಸಿಡಿಲಿಗೆ 12 ಮಂದಿ ಬಲಿ
Aug 02 2024, 12:52 AM ISTರಾಜಸ್ಥಾನದಲ್ಲಿ ಮಳೆ ಹಾಗೂ ಪ್ರವಾಹಕ್ಕೆ ಗುರುವಾರ 6 ಮಂದಿ ಸಾವನ್ನಪ್ಪಿದ್ದಾರೆ. ಕೋಟದ ಗರಗಾಂವ್ ಸೇತುವೆ ಮೇಲೆ ಪ್ರವಾಹದ ನೀರು ಉಕ್ಕೇರಿದಾಗ ಅಲ್ಲಿ ಬೈಕ್‌ನಲ್ಲಿ ಸಾಗುತ್ತಿದ್ದ ಮೂವರು ಸಾವನ್ನಪ್ಪಿದ್ದಾರೆ. ಇನ್ನು ಜೈಪುರದಲ್ಲಿ ಮನೆಯೊಂದರ ನೆಲಮಹಡಿಗೆ ನೀರು ನುಗ್ಗಿ ಮೂವರು ಬಲಿಯಾಗಿದ್ದಾರೆ.