ನಾಳೆ ಬಾಗಿಲು ತೆರೆಯಲಿರುವ ಹಾಸನಾಂಬೆ ದೇಗುಲ
Oct 24 2024, 12:49 AM ISTಅಕ್ಟೋಬರ್ ೨೪ರ ಗುರುವಾರದಂದು ಮಧ್ಯಾಹ್ನ ೧೨ ಗಂಟೆಗೆ ರಾಜ ಮನೆತನದ ನರಸಿಂಹ ರಾಜ ಅರಸು ಅವರು ಬಾಳೆಕಂದು ಕತ್ತರಿಸಿದ ನಂತರ ದೇವಿಯ ಗರ್ಭಗುಡಿಗೆ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿ ಬಾಗಿಲನ್ನು ತೆಗೆದು ದರ್ಶನ ಆರಂಭವಾಗಿ ನವೆಂಬರ್ ೩ನೇ ತಾರೀಖು ಮುಚ್ಚಲಾಗುತ್ತದೆ. ಬ್ಯಾರಿಕೇಡ್, ನೆಲಹಾಸು, ಜರ್ಮನ್ ಟೆಂಟ್, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಎಲ್ಲಾ ರೀತಿಯ ಮೂಲಭೂತ ಸೌಕರ್ಯವನ್ನು ಕಲ್ಪಿಸಲಾಗಿದೆ. ಒಂದು ಸಾವಿರ ಮತ್ತು ೩೦೦ ರು.ಗಳ ಟಿಕೆಟ್ ಪಡೆಯಲು ಪ್ರತ್ಯೇಕ ಕೌಂಟರ್ ವ್ಯವಸ್ಥೆ, ಲಾಡು ಪಡೆಯಲು ಪತ್ಯೇಕ ಕೇಂದ್ರ ಸ್ಥಾಪಿಸಲಾಗಿದೆ.