ಜಾಲಿಕಂಟಿ, ಹೂಳು ತುಂಬಿದ ಕೆರೆಗಳಿಗೆ ಇಂದಿನಿಂದ ಕಾಲುವೆ ನೀರು
May 13 2025, 01:29 AM ISTಬಿರು ಬೇಸಿಗೆಯಿಂದಾಗಿ ನೀರಿಗಾಗಿ ಪರದಾಡುವ ಸ್ಥಿತಿ ಉಂಟಾಗಿದ್ದು, ನರಗುಂದ ಹಾಗೂ ರೋಣ ತಾಲೂಕಿನ ಕೆಲ ಕೆರೆಗಳಿಗೆ ಮೇ 13ರಿಂದ ನವಿಲುತೀರ್ಥ ಜಲಾಶಯದಿಂದ ನೀರು ತುಂಬಿಸಲು ಜಿಲ್ಲಾಡಳಿತ ಮುಂದಾಗಿದೆ. ಆದರೆ, ಕೆಲ ವರ್ಷಗಳಿಂದ ಬಳಕೆ ಮಾಡದ ಹಿನ್ನೆಲೆಯಲ್ಲಿ ಪಟ್ಟಣದ ಹಾಗೂ ಗ್ರಾಮೀಣ ಕೆರೆಗಳಲ್ಲಿ ಹೂಳು ತುಂಬಿಕೊಂಡಿದ್ದು, ಎಲ್ಲೆಂದರಲ್ಲಿ ಜಾಲಿಕಂಟಿಗಳು ಬೆಳೆದು ನಿಂತಿವೆ.