ಜ.10ರಿಂದ ಭದ್ರಾ, ಜ.20ರಿಂದ ಬಲದಂಡ ನಾಲೆಗೆ ನೀರು
Jan 07 2024, 01:30 AM ISTಭದ್ರಾ ಎಡದಂಡೆ ಹಾಗೂ ಬಲದಂಡೆ ನಾಲೆಗಳ ನೀರನ್ನು ಎಚ್ಚಿಕೊಂಡು ಲಕ್ಷಾಂತರ ಹೆಕ್ಟೇರ್ನಲ್ಲಿ ರೈತರು ಕೃಷಿ ನಡೆಸುತ್ತಿದ್ದಾರೆ. ಈ ವರ್ಷ ಮಳೆ ಕೊರತೆ ಹಿನ್ನೆಲೆ ಸರ್ಕಾರ ಹಾಗೂ ರೈತರು ಡ್ಯಾಂಗಳಲ್ಲಿರುವ ನೀರು ಸದ್ಬಳಕೆಗೆ ಇನ್ನಿಲ್ಲದ ಚಿಂತೆಗೆ ಬಿದ್ದು, ಪರಿಹಾರ ಕ್ರಮ ಹಾಗೂ ಸೌಲಭ್ಯಕ್ಕಾಗಿ ಹತ್ತಾರು ರೀತಿಯ ಹೋರಾಟ ನಡೆಸುತ್ತಿದ್ದಾರೆ. ಈ ಮಧ್ಯೆ ಶಿವಮೊಗ್ಗದಲ್ಲಿ ಶನಿವಾರ ಭದ್ರಾ ಕಾಡಾ ಸಭೆಯಲ್ಲಿ ನೀರು ಹಂಚಿಕೆ ದಿನಗಳ ಕುರಿತು ಜಿಲ್ಲಾ ಸಚಿವ ಮಧು ಬಂಗಾರಪ್ಪ ನೇತೃತ್ವದಲ್ಲಿ ರೈತ ಮುಖಂಡರ ಸಭೆ ನಡೆದಿದೆ. ಈ ಸಭೆ ಕೈಗೊಂಡ ತೀರ್ಮಾನಕ್ಕೆ ರೈತರು ಆಕ್ಷೇಪವನ್ನೂ ವ್ಯಕ್ತಪಡಿಸಿ, ಪ್ರತಿಭಟಿಸಿದ್ದಾರೆ.