ಮಾರ್ಚ್‌ನಲ್ಲಿ ದಾಖಲೆಯ 16ನೇ ಬಜೆಟ್ ಮಂಡಿಸಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಗುರುವಾರದಿಂದ ಇಲಾಖಾವಾರು ಬಜೆಟ್ ಪೂರ್ವಭಾವಿ ಸಭೆ ಆರಂಭಿಸಿದ್ದಾರೆ.
ಕ್ಯಾನ್ಸರ್‌ನಿಂದ ರೋಗಿಗಳ ಜೀವ ಉಳಿಸುವ 36 ಔಷಧಿಗಳ ಮೇಲಿನ ಆಮದು ಸುಂಕವನ್ನು ಸಂಪೂರ್ಣವಾಗಿ ತೆಗೆದು ಹಾಕಲಾಗಿದೆ. ಇದರಿಂದ ಕ್ಯಾನ್ಸರ್ ರೋಗಿಗಳ ಜೀವ ಉಳಿಸುವ ಕಾರ್ಯ ಮತ್ತಷ್ಟು ಸುಗಮವಾದಂತಾಗಿದೆ.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ 2025 ಬಗ್ಗೆ ವಿವಿಧ ನಾಯಕರ ಅಭಿಪ್ರಾಯ
ಮೊದಲ ಬಾರಿ ನಿರೀಕ್ಷೆ ಮೀರಿ ಬಜೆಟ್ ಮಂಡನೆಯಾಗಿದೆ. ಜಾಗತಿಕ ಮಟ್ಟದಲ್ಲಿ ಮುಂದುವರೆದ ರಾಷ್ಟ್ರಗಳ ಆರ್ಥಿಕತೆ ಚಿಂತಾಜನಕವಾಗಿದೆ. ಹಾಗಾಗಿ ನಮ್ಮ ಆರ್ಥಿಕತೆ ಮೇಲೆಯೂ ಕೂಡ ಪರಿಣಾಮ ಬೀರುತ್ತದೆ.
ಬಜೆಟ್ ಮಂಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಈ ಬಾರಿ ಬಿಳಿ ಬಣ್ಣದ ಮಧುಬನಿ ಸೀರೆಯಲ್ಲಿ ಮಿಂಚಿದರು. ಬಿಹಾರದ ಸಾಂಪ್ರದಾಯಿಕ ಕಲೆ ಮಧುಬನಿಯ ಚಿತ್ತಾರವಿರುವ ಬಿಳಿ ಬಣ್ಣದ, ಗೋಲ್ಡನ್ ಬಾರ್ಡರ್ ಸೀರೆ, ಕೆಂಪು ರವಿಕೆ ಧರಿಸಿ ಬಂದಿದ್ದ ಸಚಿವೆ, ಅದರ ಜೊತೆಗೆ ಒಂದು ಶಾಲು ಧರಿಸಿ ಗಮನ ಸೆಳೆದರು.
ಈ ಬಾರಿಯ ಕೇಂದ್ರ ಬಜೆಟ್ ಮಧ್ಯಮವರ್ಗದವರನ್ನು ಓಲೈಸುವಂತಿದೆ. ದೇಶದ ಸಾಮಾನ್ಯ ಜನರಿಗೆ, ಅದರಲ್ಲೂ ವಿಶೇಷವಾಗಿ ದುಡಿಯುವ ವರ್ಗದವರಿಗೆ ಅನುಕೂಲವಾಗುವಂತೆ ತೆರಿಗೆ ವಿನಾಯಿತಿ ಮಿತಿಗಳಲ್ಲಿ ಹೆಚ್ಚಳ ಮಾಡಿರುವುದು ಬಜೆಟ್‌ನ ಕೊಡುಗೆಗಳಲ್ಲಿ ಪ್ರಮುಖವಾಗಿದೆ