ಬಜೆಟ್ ನಲ್ಲಿ ಮುಧೋಳ ನಗರ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು: ಪೌರಾಯುಕ್ತ ಗೋಪಾಲ ಕಾಸೆ
Jan 31 2024, 02:18 AM ISTಮುಧೋಳ: ನಗರದ ಸರ್ವತೋಮುಖ ಅಭಿವೃದ್ಧಿಗೆ ಅವಶ್ಯವಿರುವ ಅನುದಾನವನ್ನು ಹಾಗೂ ತಾವು ನೀಡಿದ ಸಲಹೆಯಂತೆ ಬಜೆಟ್‌ನಲ್ಲಿ ಕಾಯ್ದಿರಿಸುವುದಾಗಿ ನಗರಸಭೆ ಪೌರಾಯುಕ್ತ ಗೋಪಾಲ ಕಾಸೆ ಭರಸವೆ ನೀಡಿದರು. ನಗರಸಭೆ ಆಡಳಿತಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಅವರ ಅನುಮೋದನೆಯಂತೆ ಮಂಗಳವಾರ ಮುಧೋಳ ನಗರಸಭೆಯ 2024-25ನೇ ಸಾಲಿನ ಅಂದಾಜು ಆಯವ್ಯಯ ಪತ್ರಿಕೆ (ಬಜೆಟ್) ತಯಾರಿಕೆಯ ಎರಡನೇ ಸುತ್ತಿನ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿದರು.