ಹನುಮ ಧ್ವಜ ತೆರವು ವಿವಾದ: ಬಿಜೆಪಿ ಪ್ರತಿಭಟನೆ
Jan 30 2024, 02:06 AM ISTಹನುಮಧ್ವಜ ತೆರವು ವಿರೋಧಿಸಿ ಮಂಗಳೂರಿನಲ್ಲಿ ಸೋಮವಾರ ಬಿಜೆಪಿ ಪ್ರತಿಭಟಿಸಿತು. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಹಿಂದೂಗಳ 500 ವರ್ಷಗಳ ಕನಸಾಗಿದ್ದು, ಈ ಸಂಭ್ರಮವನ್ನು ಇಡೀ ದೇಶ ಸಂಭ್ರಮಿಸಿದೆ. ಈ ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ಹನುಮ ಧ್ವಜವನ್ನು ಹಾಕಲಾಗಿತ್ತು. ಹಿಂದುಸ್ಥಾನದಲ್ಲಿ ಹಿಂದುಗಳ ಧ್ವಜ ಹಾಕಲು ಯಾರನ್ನಾದರೂ ಕೇಳಬೇಕಾ ಎಂದು ಬಿಜೆಪಿ ವಿಭಾಗ ಪ್ರಭಾರಿ ಉದಯ ಕುಮಾರ್ ಶೆಟ್ಟಿ ಪ್ರಶ್ನಿಸಿದ್ದಾರೆ.