ಕೊಪ್ಪ: ಕಾಡನೆ ಹಾವಳಿಗೆ ಬೆಳೆ ನಾಶ, ಗ್ರಾಮಸ್ಥರಲ್ಲಿ ಆತಂಕ
Jul 25 2025, 12:30 AM ISTಕೊಪ್ಪ, ತಾಲ್ಲೂಕಿನ ಮರಿತೊಟ್ಟಲು ಗ್ರಾಪಂ ವ್ಯಾಪ್ತಿಯ ತನೂಡಿ ಗ್ರಾಮದ ತೋಟದಕೊಪ್ಪ ಎಂಬಲ್ಲಿ ಕಾಡಾನೆಗಳು ಸೋಮವಾರ ರಾತ್ರಿ ವೇಳೆಯಲ್ಲಿ ತೋಟ, ಗದ್ದೆಗಳಿಗೆ ನುಗ್ಗಿ ಬಾಳೆ, ಅಡಕೆ, ಕಾಫಿ ಬೆಳೆಗಳಿಗೆ ಹಾನಿ ಮಾಡಿವೆ. ಮಂಗಳವಾರ ಮತ್ತು ಬುಧವಾರ ರಾತ್ರಿ ಅಂದಗಾರು ಸುತ್ತಮುತ್ತ ಪ್ರದೇಶಗಳಲ್ಲಿ ಆನೆ ದಾಳಿ ಮುಂದುವರಿದಿದೆ ಬುಧವಾರ ರಾತ್ರಿ ನಾರ್ವೆ ಘಾಟಿಯ ಎನ್.ಕೆ. ರಸ್ತೆಯ ಬಳಿಯ ರಾಧಕೃಷ್ಣ ಎನ್ನುವವರ ತೊಟಕ್ಕೆ ಬಂದ ಕಾಡನೆ ತೆಂಗಿನ ಗಿಡ, ಬಾಳೆಗಿಡಗಳನ್ನು ನಾಶಪಡಿಸಿದೆ. ಕೊಪ್ಪದ ಕೃಷಿಕ ಜಯಂತ್ ಪೂಜಾರಿ, ಉಮೇಶ್, ಕೇಶವ್ ಗೌಡ, ಹರೀಶ, ದಾಮೋದರ್ ಶೆಟ್ಟಿ, ನಸೀರ್ ಎಂಬುವರ ತೋಟಗಳಿಗೆ ಕಾಡಾನೆ ಹಾನಿ ಮಾಡಿವೆ. ತೋಟದಲ್ಲಿ ಆನೆ ಲದ್ದಿ, ಕಾಲಿನ ಪಾದದ ಗುರುತು ಮೂಡಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.