ಕಾಡಾನೆಯಿಂದ ಬೆಳೆ ಹಾನಿ ವೀಕ್ಷಿಸಿದ ಶಿವರಾಂ
Mar 03 2025, 01:48 AM ISTಅರೇಹಳ್ಳಿಯ ಮಾಲಹಳ್ಳಿ ಚಂದ್ರು ಅವರ ತೋಟದಲ್ಲಿ ಕಾಡಾನೆಗಳು ೩ ದಿನ ದಾಳಿ ಮಾಡಿ ಕಾಫಿ, ಅಡಿಕೆ, ಬಾಳೆ ಗಿಡಗಳನ್ನು ನಾಶ ಮಾಡಿದ್ದು ಮಾಜಿ ಸಚಿವ ಬಿ ಶಿವರಾಂ ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸೋಮವಾರ ಮಧ್ಯಾಹ್ನ ಅರಣ್ಯ ಸಚಿವ ಈಶ್ವರ ಖಂಡ್ರೆ ಕಾಡಾನೆಯಿಂದ ಹಾನಿಗೀಡಾದ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದು, ಈ ಸಂದರ್ಭದಲ್ಲಿ ಬೆಳೆ ಹಾನಿಗೊಳಗಾಗಿರುವ ಕಾಫಿ ಬೆಳೆಗಾರರು, ರೈತರ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.