ಮಳೆರಾಯನ ಕಣ್ಣಾಮುಚ್ಚಾಲೆ: ಬೆಳೆ ಬಿತ್ತಿದ ರೈತರಲ್ಲಿ ಆತಂಕದಛಾಯೆ
Jul 11 2025, 12:32 AM IST ಬೀರೂರು, ರಾಜ್ಯಾದ್ಯಂತ ಕರಾವಳಿ, ಮಲೆನಾಡು ಭಾಗದಲ್ಲಿ ಅಬ್ಬರಿಸಿದ ಪೂರ್ವಮುಂಗಾರಿಗೆ ಗಿರಿಶ್ರೇಣಿಗಳ ಜಲಪಾತಗಳಲ್ಲಿ ನೀರು ಧುಮುಕ್ಕಿದರೂ ಬಯಲುಸೀಮೆಯ ತಾಲೂಕಿನಲ್ಲಿ ಮಳೆರಾಯನ ಕಣ್ಣಾಮುಚ್ಚಾಲೆ ಆಟದಿಂದ ರೈತರು ಬೇಸತ್ತು ಬಿತ್ತಿದ ಬೆಳೆಗಳಿಗೆ ಫಲ ಲಭಿಸುವುದೇ ಎಂಬ ಆತಂಕದಲ್ಲೇ ದಿನದೂಡುವ ಪರಿಸ್ಥಿತಿ ನಿರ್ಮಾಣವಾಗಿದೆ.