ರೈತರ ಬೆಳೆ ಸಾಲಗಳ ಪರಿಮಿತಿ ಹೆಚ್ಚಳಕ್ಕೆ ನಿರ್ಧಾರ
Jan 04 2025, 12:32 AM ISTಶಿವಮೊಗ್ಗ: ಜಿಲ್ಲೆಯ ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ಅರ್ಹ ರೈತರಿಗೆ ಎಕರೆವಾರು ಮತ್ತು ಬೆಳೆವಾರು ನೀಡಬಹುದಾದ ಸಾಮಾನ್ಯ ಬೆಳೆ, ತೋಟಗಾರಿಕೆ ಬೆಳೆಗಳು, ಕಾಫಿ ಬೆಳೆಗಳು, ರೇಷ್ಮೆ ಬೆಳೆ, ಸಾಂಬಾರ ಪದಾರ್ಥಗಳು, ವಾಣಿಜ್ಯ ಹೂ ಬೆಳೆಗಳು, ಕೃಷಿ ಮತ್ತು ಕೃಷಿಗೆ ಸಂಬಂಧಿತ ವಸ್ತುಗಳನ್ನು ಶೇಖರಿಸಲು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಹಾಗೂ ಅಧೀನ ಬ್ಯಾಂಕ್ಗಳ ಮೂಲಕ ನೀಡಲಾಗುವ ಬೆಳೆ ಸಾಲದ ಪರಿಮಿತಿಯನ್ನು ಹೆಚ್ಚಿಸಿ, ರಾಜ್ಯ ಮಟ್ಟದ ತಾಂತ್ರಿಕ ಸಭೆಗೆ ಶಿಫಾರಸು ಮಾಡಲು ತಾಂತ್ರಿಕ ಸಮಿತಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.