ಮಹಿಳೆ ಕ್ಷಮೆ ಕೇಳಿದ ಹೂಗಳನ್ನು ಚೆಲ್ಲಿದ್ದ ವ್ಯಕ್ತಿ
Jan 01 2025, 12:00 AM ISTಕನ್ನಪ್ರಭ ವರದಿ ವಿಜಯಪುರ: ದಲಿತ, ಅಹಿಂದ ಸಂಘಟನೆಗಳು ಸೋಮವಾರ ಕರೆ ನೀಡಿದ್ದ ವಿಜಯಪುರ ಬಂದ್ ವೇಳೆ ಹೂ ಮಾರಾಟಕ್ಕೆಂದು ಬಂದಿದ್ದ ಉಮಾ ಸಿಂಗಾಡೆ ಎಂಬ ಮಹಿಳೆಯೊಬ್ಬಳು ಮಾರಾಟಕ್ಕೆ ತಂದಿದ್ದ ಹೂವನ್ನು ರಸ್ತೆ ಮೇಲೆ ಚೆಲ್ಲುವ ಮೂಲಕ ದಲಿತ ವ್ಯಕ್ತಿಯೊಬ್ಬರು ಅಟ್ಟಹಾಸ ಮರೆದಿದ್ದರು. ನಗರದ ಲಾಲ್ ಬಹದ್ದೂರ್ ಶಾಸ್ತ್ರೀ ಮಾರುಕಟ್ಟೆಯ ಬಳಿ ಘಟನೆ ನಡೆದಿದ್ದು, ಹೂ ರಸ್ತೆ ಪಾಲಾಗಿದ್ದರಿಂದ ಆ ಮಹಿಳೆ ಕಣ್ಣೀರಿಟ್ಟು ಅಸಹಾಯಕತೆ ವ್ಯಕ್ತಪಡಿಸಿದ್ದಳು. ಈ ಕುರಿತು ಕನ್ನಡಪ್ರಭ ವರದಿ ಪ್ರಕಟಿಸಿತ್ತು.