ಕಾರು- ರಿಕ್ಷಾ ಡಿಕ್ಕಿ: ಮಹಿಳೆ ಸ್ಥಳದಲ್ಲೇ ಸಾವು
Dec 06 2024, 09:00 AM IST ಮಂಗಳೂರಿನಿಂದ ಪುಂಜಾಲಕಟ್ಟೆ ಕಡೆಗೆ ಬರುತ್ತಿದ್ದ ರಿಟ್ಜ್ ಕಾರು ಹಾಗೂ ರಿಕ್ಷಾ ನಡುವೆ ಅಪಘಾತ ಸಂಭವಿಸಿದೆ. ಪಂಜಿಕಲ್ಲು ಬಾಂದೊಟ್ಟು ರೆಚ್ಚಾಡಿ ನಿವಾಸಿ ಹರೀಶ್ ಎಂಬವರ ಪತ್ನಿ ತಿಲಕ (40) ಮೃತಪಟ್ಟಿದ್ದಾರೆ. ರಿಕ್ಷಾದಲ್ಲಿದ್ದ ಯಶಸ್ವಿನಿ, ಗೀತಾ , ರೇವತಿ, ಸರಸ್ವತಿ, ವೇದಾವತಿ, ರಾಜೀವಿ ಮತ್ತು ಮಕ್ಕಳಾದ ದಿಗಂತ್ ಹಾಗೂ ದಿಶಾನಿ ಅವರು ಗಾಯಗೊಂಡಿದ್ದಾರೆ.