ಸ್ಮಶಾನ ಜಾಗ ವಿವಾದ: ಅಂತ್ಯ ಸಂಸ್ಕಾರಕ್ಕೆ ತೆಗೆದ ಗುಂಡಿಗೆ ಇಳಿದು ಪ್ರತಿಭಟಿಸಿದ ಮಹಿಳೆ
Dec 07 2024, 12:32 AM ISTಚಿಕ್ಕಮಗಳೂರುತಾಲೂಕಿನ ಆಲ್ದೂರು ಗ್ರಾಮದಲ್ಲಿ ವಿವಾದಿತ ಜಾಗಕ್ಕೆ ಸಂಬಂಧಿಸಿದಂತೆ ದಲಿತ ಹಾಗೂ ಒಕ್ಕಲಿಗ ಸಮಾಜದ ನಡುವಿನ ಗಲಾಟೆ ತೀವ್ರವಾಗಿದ್ದು, ವಿವಾದಿತ ಸ್ಥಳದಲ್ಲೇ ಶುಕ್ರವಾರ ದಲಿತರು ಪಾರ್ಥಿವ ಶರೀರದ ಅಂತ್ಯ ಸಂಸ್ಕಾರ ನಡೆಸಿದ್ದಾರೆ. ಈ ವೇಳೆ ಒಕ್ಕಲಿಗ ಸಮುದಾಯ ಹಾಗೂ ದಲಿತರ ನಡುವೆ ವಾಗ್ದಾಳಿ ನಡೆದಿದ್ದಲ್ಲದೆ ಒಕ್ಕಲಿಗ ಸಮುದಾಯದ ಮಹಿಳೆ ಶವ ಸಂಸ್ಕಾರದ ಗುಂಡಿಯೊಳಗೆ ಇಳಿದು ಪ್ರತಿಭಟನೆ ನಡೆಸಿದ್ದಾರೆ.