ಬಹಿರ್ದೆಸೆಗೆ ಹೋಗಿದ್ದಾಗ ರೈತ ಮಹಿಳೆ ಮೇಲೆ ಕಾಡಾನೆ ದಾಳಿ
Jan 19 2024, 01:47 AM ISTಸರಗೂರು ತಾಲೂಕಿನ ಎಂ.ಸಿ. ತಳಲು ಗ್ರಾಮದ ಕೆಂಪದೇವಮ್ಮ ಗಾಯಗೊಂಡವರು. ಬಹಿರ್ದೆಸೆಗೆ ಹೋಗಲು ಮುಂಜಾನೆ ಪ್ರಾಥಮಿಕ ಆರೋಗ್ಯ ಕೇಂದ್ರದ ಸಮೀಪದಲ್ಲಿ ಹೋಗುತ್ತಿದ್ದಾಗ ಹಿಂಬದಿಯಿಂದ ಕಾಡಾನೆ ದಾಳಿ ನಡೆಸಿದೆ. ಪಕ್ಕದಲ್ಲೇ ಇದ್ದ ನಿವಾಸಿಯೊಬ್ಬರು ಬ್ಯಾಟರಿಯಲ್ಲಿ ಬೆಳಕು ಬಿಟ್ಟು, ಜೋರಾಗಿ ಕೂಗಿದ್ದಾರೆ. ಕೂಗಿದ ಶಬ್ಧಕ್ಕೆ ಆನೆ ಸ್ಥಳದಿಂದ ಕಾಡಿನತ್ತ ಪರಾರಿಯಾಗಿದೆ ಎನ್ನಲಾಗಿದೆ.