ಬಸನಗೌಡ ಪಾಟೀಲ್ ಯತ್ನಾಳ್ ಹಿಂದುಗಳ ಹುಲಿಯಲ್ಲ, ಇಲಿ. ನಿಮ್ಮ ಆಟ ಇನ್ನು ಹೆಚ್ಚು ದಿನ ನಡೆಯೋದಿಲ್ಲ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಕಿಡಿಕಾರಿದರು.
ಬಿಜೆಪಿಯಲ್ಲಿ ಬಣ ಜಗಳ ತಾರಕಕ್ಕೇರಿದ್ದು, ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟೀಂಗೆ ಟಾಂಗ್ ಕೊಡಲು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ತಂಡ ದೇಗುಲ ಯಾತ್ರೆ ಆರಂಭಿಸಿದೆ.
‘ದೆಹಲಿಯಿಂದ ಹೈಕಮಾಂಡ್ನವರು ಬುಧವಾರ ನನಗೆ ಕರೆ ಮಾಡಿ, ತಕ್ಷಣ ಹೊರಟು ಬನ್ನಿ ಎಂದಿದ್ದರು. ಆದರೆ, ನಾನು ಒಬ್ಬನೇ ಬರೋದಿಲ್ಲ, ನನ್ನ ಟೀಮ್ ಸಹಿತ ಬರುವೆ ಎಂದು ಉತ್ತರಿಸಿದ್ದೇನೆ’ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದ್ದಾರೆ.