ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಉದ್ದೇಶಿತ ‘ಬೆಂಗಳೂರು ಬಿಸಿನೆಸ್‌ಕಾರಿಡಾರ್’ (ಬಿಬಿಸಿ) ನಿರ್ಮಾಣಕ್ಕೆ 27 ಸಾವಿರ ಕೋಟಿ ರು.ಸಾಲ ನೀಡಲು ವಸತಿ ಮತ್ತು ನಗರಾಭಿವೃದ್ಧಿ ಕಾರ್ಪೊರೇಷನ್(ಹುಡ್ಕೊ) ಒಪ್ಪಿಗೆ ನೀಡಿದೆ. ಶೀಘ್ರದಲ್ಲೇ ಈ ಸಂಬಂಧ ಈ ಎರಡೂ ಸಂಸ್ಥೆಗಳು ಒಡಂಬಡಿಕೆ ಮಾಡಿಕೊಳ್ಳಲಿವೆ.