ಪಿಎಂ ಸುರಕ್ಷಾ ವಿಮಾ ಯೋಜನೆ ಬಗ್ಗೆ ಮಾಹಿತಿ
Sep 21 2024, 01:50 AM ISTಭಾರತೀಯ ಅಂಚೆ ಇಲಾಖೆಯ ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆಯಲ್ಲಿ ಮಾತ್ರ ವರ್ಷಕ್ಕೆ ೫೨೦ ರು. ಹಣ ಪಾವತಿಸಿ ವಿಮೆ ಮಾಡಿಸಿಕೊಂಡಲ್ಲಿ ಯಾವುದೇ ರೀತಿಯ ಅಪಘಾತ ಅಂದರೆ ಅಕಸ್ಮಾತ್ ಜಾರಿ ಬಿದ್ದು ಮೂಳೆ ಮುರಿದರೂ ವಿಮೆ ಯೋಜನೆಯಲ್ಲಿ ನಿಯಮಾನುಸಾರ ಧನ ಸಹಾಯ ದೊರೆಯುತ್ತದೆ, ಮೃತಪಟ್ಟಲ್ಲಿ ೧೦ ಲಕ್ಷ ರು. ಮತ್ತು ಸಂಪೂರ್ಣ ಊನಗೊಂಡರೂ ಗರಿಷ್ಠ ಮೊತ್ತ ದೊರೆಯುತ್ತದೆ ಹಾಗೂ ಈ ರೀತಿಯ ಸೌಲಭ್ಯ ಇನ್ಯಾವುದೇ ವಿಮಾ ಯೋಜನೆಯಲ್ಲಿ ಇಲ್ಲವೆಂದು ಹಾಸನದ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಹಿರಿಯ ವ್ಯವಸ್ಥಾಪಕ ಪ್ರಕಾಶ್ ನಾಯಕ್ ಮಾಹಿತಿ ನೀಡಿದರು.