ಆಶ್ರಯ ನಿವೇಶನ ಹಂಚಲು ಕ್ರಿಯಾ ಯೋಜನೆ ಸಲ್ಲಿಸಿ
Sep 01 2024, 02:00 AM ISTಹೊನ್ನಾಳಿ ತಾಲೂಕಿನ ಸುಂಕದಕಟ್ಟೆ ಸಮೀಪದ ಮಲ್ಲದೇವರಕಟ್ಟೆ ಬೇಚಾರಕ್ ಗ್ರಾಮದ ಸರ್ವೆ ನಂ.4ರಲ್ಲಿ 29.17 ಎಕರೆಯಲ್ಲಿ ಆಶ್ರಯ ಯೋಜನೆಯಡಿ ಬಡವರಿಗೆ ನಿವೇಶನ ಹಂಚಿಕೆ ಮಾಡಲು ಸ್ಥಳ ಗುರುತಿಸಲಾಗಿದೆ. ಮರ-ಗಿಡಗಳನ್ನು ಕಡಿದು, ಸಮತಟ್ಟು ಮಾಡಬೇಕು. ಸೈಟ್‌ಗಳಿಗೆ ಕಲ್ಲು ನೆಡಿಸಲು ಬುಧವಾರದೊಳಗೆ ಕ್ರಿಯಾ ಯೋಜನೆ ತಯಾರಿಸಿ, ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸಬೆಕು ಎಂದು ಪುರಸಭೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಸೂಚಿಸಿದರು.