ರಾಜ್ಯ ಕ್ರಿಕೆಟ್ ತಂಡಕ್ಕೆ ಶ್ರೇಯಾ ಚವ್ಹಾಣ ಆಯ್ಕೆ
Sep 18 2024, 01:59 AM ISTಕನ್ನಡಪ್ರಭ ವಾರ್ತೆ ವಿಜಯಪುರ: 19 ವರ್ಷ ವಯೋಮಾನದ ಕರ್ನಾಟಕ ರಾಜ್ಯ ಕ್ರಿಕೆಟ್ ಮಹಿಳಾ ಟಿ-20 ಹಾಗೂ ಏಕದಿನ ಸರಣಿಗೆ ನಗರದ ಶ್ರೇಯಾ ಚವ್ಹಾಣ ಆಯ್ಕೆಯಾಗಿದ್ದಾಳೆ. ರಾಜ್ಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿರುವ ಶ್ರೇಯಾ ಚವ್ಹಾಣ ಅಕ್ಟೋಬರ್ 1ರಿಂದ ಚೆನೈಯಲ್ಲಿ ನಡೆಯಲಿರುವ ರಾಜ್ಯ ಮಹಿಳಾ ಅಂಡರ್-19 ತಂಡದಲ್ಲಿ ಆಡಲಿದ್ದಾರೆ. ಈ ತಂಡವು ಗುಜರಾತ, ಬರೋಡಾ, ಛತ್ತಿಸಗಡ, ಮಿಜೋರಾಂ ಹಾಗೂ ಮಹಾರಾಷ್ಟ್ರ ತಂಡಗಳ ಜೊತೆಗೆ ಏಕದಿನ ಶ್ರೇಣಿ ಪಂದ್ಯಗಳನ್ನು ಆಡಲಿದೆ.