ನಸುಕಿನಲ್ಲಿಯೇ ಚುರುಕು ಮುಟ್ಟಿಸಿದ ಲೋಕಾಯುಕ್ತ
Oct 31 2023, 01:17 AM ISTಜಿಲ್ಲೆಯ ಆಯಕಟ್ಟಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇಬ್ಬರು ಅಧಿಕಾರಿಗಳ ಮನೆ ಹಾಗೂ ಫಾರಂ ಹೌಸ್ ಮೇಲೆ ಸೋಮವಾರ ದಾಳಿ ನಡೆಸಿರುವ ಲೋಕಾಯುಕ್ತ ಪೊಲೀಸರು ಚಿನ್ನಾಭರಣ, ನಗದು ಸೇರಿದಂತೆ ಕೆಲ ಕಾಗದ ಪತ್ರಗಳ ವಶಪಡಿಸಿಕೊಂಡಿದ್ದಾರೆ. ಅರಣ್ಯ ಇಲಾಖೆ ಹಿರಿಯೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಎಸಿಎಫ್ ನಾಗೇಂದ್ರ ನಾಯ್ಕ್ ಮನೆ ಮೇಲೆ ಮುಂಜಾನೆ ಏಳು ಗಂಟೆಗೆ ದಾಳಿ ಮಾಡಿದ ಲೋಕಾಯುಕ್ತ ಎಸ್ಪಿ ವಾಸುದೇವರಾಮ್ ನೇತೃತ್ವದ ತಂಡ ಇಡೀ ಮನೆಯನ್ನು ಪೂರ್ಣ ಪ್ರಮಾಣದಲ್ಲಿ ತಲಾಶ್ ಮಾಡಿತು. ರಾತ್ರಿ ಏಳುವರೆ ವರೆಗೂ ದಾಳಿ ಮುಂದವರಿದಿತ್ತು. ನಾಗೇಂದ್ರ ನಾಯ್ಕರ ಚಂದ್ರಾ ಲೇ ಔಟ್ ಮನೆ ಹಾಗೂ ತವನಿಧಿ ಗ್ರಾಮದ ಬಳಿಯ ಫಾರ್ಮ್ ಹೌಸ್ ಮೇಲೆ ಏಕಕಾಲಕ್ಕೆ ದಾಳಿ ನಡೆಯಿತು.