ಹಲವು ದಶಕಗಳ ಕಾಲ ಹುಟ್ಟಿ ಬೆಳೆದ ಮನೆ, ಬಿತ್ತಿದ ಭೂಮಿ, ಮಠ, ಮಂದಿರದ ಜಾಗವನ್ನು ಇದ್ದಕ್ಕಿದ್ದಂತೆ ತನ್ನದೆನ್ನುವ ವಕ್ಫ್ ಮಂಡಳಿ ವಾದ ಕರ್ನಾಟಕದಲ್ಲಿ ಮಾತ್ರ ನಡೆಯುತ್ತಿಲ್ಲ, ಹಿಂದುಗಳು ಮಾತ್ರ ಆತಂಕಗೊಂಡಿಲ್ಲ. ನೆರೆಯ ಕೇರಳ ರಾಜ್ಯದಲ್ಲಿರುವ ಬಡ ಕ್ರಿಶ್ಚಿಯನ್ ಕುಟುಂಬಗಳಿಗೂ ಈ ಬಿಸಿ ತಟ್ಟಿದೆ.
ಭೂ ಸುಧಾರಣೆ ನೀತಿಯಡಿ ರೈತರಿಗೆ ಬಂದಿರುವ ವಕ್ಫ್ ಆಸ್ತಿಯನ್ನು ತೆರವುಗೊಳಿಸದೆ, ಅಕ್ರಮವಾಗಿ ಒತ್ತುವರಿಗೆ ಗುರಿಯಾಗಿರುವ ವಕ್ಫ್ ಆಸ್ತಿಯನ್ನು ಸಂರಕ್ಷಿಸಲು ಅಧಿಸೂಚನೆ ಹೊರಡಿಸುವ ಮೂಲಕ ವಕ್ಫ್ ಆಸ್ತಿ ವಿವಾದ ಇತ್ಯರ್ಥಪಡಿಸಲು ಸರ್ಕಾರ ಚಿಂತನೆ ನಡೆಸಿದೆ.