ಶಿಕ್ಷಣ ಜೊತೆಗೆ ಸಂಸ್ಕಾರವೂ ಮುಖ್ಯ: ಶಿವಲಿಂಗೇಶ್ವರ ಶ್ರೀ

Feb 03 2024, 01:48 AM IST
ಸಮಾಜದಲ್ಲಿ ಶಿಕ್ಷಣ ಕಲಿಸುವಂಥ ಸಂಸ್ಥೆಗಳು ಅಧಿಕ. ಆದರೆ ಸಂಸ್ಕಾರ ಹೇಳಿ ಕೊಡುವ ಪಾಠ ಶಾಲೆ ವಿರಳ. ಆದ್ದರಿಂದ ಮನುಷ್ಯನ ಸಾರ್ಥಕ ಬದುಕಿಗೆ ಕಾರಣವಾಗುವ ಸಂಸ್ಕಾರ, ಸಂಸ್ಕೃತಿ ಬಗೆಗಿನ ನೀತಿಯನ್ನು ಬೋಧಿಸುವ ಸಂಸ್ಥೆಗಳು ಸಮಾಜದಲ್ಲಿ ಪ್ರಸ್ತುತವಾಗಬೇಕು. ಮನುಷ್ಯನಿಗೆ ಕೇವಲ ಶಿಕ್ಷಣ ಒಂದಿದ್ದರೆ ಸಾಲದು, ಸಂಸ್ಕಾರವೂ ಬೇಕಾಗುತ್ತದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಮೂಲಕ ಮಹಿಳೆಯರನ್ನು ಸಂಘಟಿಸಿ, ಸಮಾಜಮುಖಿ ಕಾರ್ಯಕ್ರಮಗಳನ್ನು ರೂಪಿಸಿ, ಜ್ಞಾನದ ಜತೆಗೆ ಸಂಸ್ಕಾರ ಕಲಿಸುತ್ತಿದ್ದಾರೆ. ಇದು ಕುಟುಂಬದಲ್ಲಿನ ಒಗ್ಗಟ್ಟು ಮತ್ತು ಸ್ವಾವಲಂಬಿ ಬದುಕಿಗೆ ನೆರವಾಗುತ್ತದೆ ಎಂದು ಗೇರುಕೊಪ್ಪ ಮತ್ತು ಬಪ್ಪಗೊಂಡನಕೊಪ್ಪ ಗ್ರಾಮಗಳ ಇಂದೂಧರ ಮಠದ ಶಿವಲಿಂಗೇಶ್ವರ ಮಹಾಸ್ವಾಮೀಜಿ ಸೊರಬದ ಮಂಚಿ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.