ದಲಿತರ ಸ್ವಾಭಿಮಾನದ ಬದುಕಿಗೆ ಶಿಕ್ಷಣ ಒಂದೇ ಮಾರ್ಗ
Sep 15 2024, 01:57 AM ISTಗುರುಮೂರ್ತಿ ಅವರ ಒಡಲ ಧ್ವನಿ ಕಾದಂಬರಿಯಲ್ಲಿ ನಮ್ಮ ಸಮಾಜದಲ್ಲಿ ದಲಿತರ ಬದುಕು, ಬವಣೆ ಮತ್ತು ಪ್ರಸ್ತುತ ಸನ್ನಿವೇಶಗಳನ್ನು ಕಟ್ಟಿಕೊಡುವ ಕೆಲಸ ಮಾಡಿದ್ದಾರೆ. ಇದು ದಲಿತ ಸಾಹಿತ್ಯದ ಹೊಸ ಮೈಲುಗಲ್ಲಾಗಲಿದೆ. ಏಕೆಂದರೆ ಗುರುಮೂರ್ತಿ ಅವರು ದಲಿತ ಚಳವಳಿಯ ಪ್ರೇರಣೆಯ ವ್ಯಕ್ತಿಯಾಗಿ ತಮ್ಮ ಅನುಭವವನ್ನು ಅಕ್ಷರ ರೂಪದಲ್ಲಿ ಹೊರತಂದಿದ್ದಾರೆ ಎಂದು ರಾಜ್ಯಸಭಾ ಮಾಜಿ ಸದಸ್ಯ ಡಾ.ಎಲ್.ಹನುಮಂತಯ್ಯ ಮೆಚ್ಚುಗೆ ವ್ಯಕ್ತಪಡಿಸಿದರು. ದಲಿತರು, ಶೋಷಿತರು ಮತ್ತು ತಳ ಸಮುದಾಯದವರು ಹಸಿವು ಮತ್ತು ಅಸ್ಪಶ್ಯತೆ, ಗುಲಾಮಗಿರಿಯಿಂದ ಹೊರಬಂದು ಸ್ವಾಭಿಮಾನದ ಬದುಕನ್ನು ಕಂಡುಕೊಳ್ಳಬೇಕಾದರೆ ಅಕ್ಷರದ ಬೆಳಕು ಅತಿ ಮುಖ್ಯವಾಗಿದೆ ಎಂದರು.