ಶಿಕ್ಷಣ ಜತೆಗೆ ಆತ್ಮರಕ್ಷಣೆ ಕಲೆಗಳೂ ಮುಖ್ಯ: ಶ್ರೀಪಾದ ಬಿಚ್ಚುಗತ್ತಿ
Feb 26 2024, 01:35 AM IST ಶೈಕ್ಷಣಿಕ ಪ್ರಗತಿಯ ಜತೆಗೆ ಸ್ವಾವಲಂಬನೆ, ಆತ್ಮರಕ್ಷಣೆಗೆ ಪೂರಕ ಆಗುವಂತಹ ಚಟುವಟಿಕೆಗಳನ್ನು ಮಕ್ಕಳಿಗೆ ನೀಡುವ ಮೂಲಕ ಅವರಲ್ಲಿ ಆತ್ಮಸ್ಥೈರ್ಯ ಮೂಡಿಸಬೇಕು. ಮಕ್ಕಳ ಮಾನಸಿಕ ಮತ್ತು ಬೌದ್ಧಿಕ ವಿಕಾಸಕ್ಕೆ ಪೂರಕವಾಗಿ ಶಿಕ್ಷಣ ದೊರಕಬೇಕು. ಆಗ ಮಾತ್ರ ಗುಣಾತ್ಮಕ ಶಿಕ್ಷಣಕ್ಕೆ ಅರ್ಥ ಮೂಡುತ್ತದೆ. ವಿಶೇಷವಾಗಿ ಹಳೇ ಸೊರಬ ಸರ್ಕಾರಿ ಪ್ರೌಢಶಾಲೆ ಗ್ರಾಮಾಂತರ ಪ್ರದೇಶಗಳ ಮಕ್ಕಳ ಅಂತರ್ಗತ ಮೌಲ್ಯಗಳನ್ನು ಗುರುತಿಸಿ, ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಮುಂಚೂಣಿಯಲ್ಲಿದೆ ಎಂದು ಇತಿಹಾಸ ಸಂಶೋಧಕ ಶ್ರೀಪಾದ ಬಿಚ್ಚುಗತ್ತಿ ಸೊರಬದಲ್ಲಿ ಹೇಳಿದ್ದಾರೆ.