ಸುಸಂಸ್ಕೃತ ರಾಜಕಾರಣಿ- ಶಿಕ್ಷಣ, ಕಲಾ ಪೋಷಕರಾಗಿದ್ದ ವಾಸು
Mar 10 2024, 01:33 AM ISTವಾಸು ಅವರು ಸಾಕಷ್ಟು ಅನುಕೂಲವಾಗಿದ್ದರು. ಹೀಗಾಗಿ ರಾಜಕಾರಣದಲ್ಲಿದ್ದರೂ ಯಾವುದೇ ಲಂಚ,ರುಷುವತ್ತುಗಳಿಗೆ ಆಸೆ ಪಡದೆ ಪ್ರಾಮಾಣಿಕರಾಗಿದ್ದರು. ಶಾಸಕರಾಗಿದ್ದಾಗ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆದ ನೂರಾರು ಕೋಟಿ ರು.ಗಳ ಕಾಮಗಾರಿಗಳ ಕಮೀಷನ್ ಅನ್ನು ಕೋಟಿ ಕೋಟಿ ಲೆಕ್ಕದಲ್ಲಿ ತಲುಪಿಸಲು ಬಂದ ಅಧಿಕಾರಿಗಳಿಗೆ ಬೈದು, ಬುದ್ಧಿ ಹೇಳಿ, ಇದರ ಬದಲು ಕಾಮಗಾರಿಗಳನ್ನು ಗುಣಮಟ್ಟದಿಂದ ಮಾಡಿ ಎಂದು ಸಲಹೆ ನೀಡಿ, ಕಳುಹಿಸುತ್ತಿದ್ದರು.