ಇ-ಸ್ವತ್ತು ವಿತರಿಸಿ ಬಡವರಿಗೆ ಅನುಕೂಲ ಕಲ್ಪಿಸಿ: ಸಚಿವ ಎಸ್.ಎಸ್.ಮಲ್ಲಿಕಾರ್ಜುನ್
Feb 14 2024, 02:21 AM ISTಜನರು ಆಸ್ತಿ ತೆರಿಗೆ ಪಾವತಿಸಿ ಇ-ಆಸ್ತಿ ದಾಖಲೆ ಪಡೆಯಲು ಬಂದಾಗ ಈ ಹಿಂದೆ ಬಡಾವಣೆ ನಕ್ಷೆ, ಮನೆ ನಕ್ಷೆ, ಮನೆ ನಿರ್ಮಾಣ ಪರವಾನಗಿ ದಾಖಲೆಗಳನ್ನು ಕೇಳದೆ ಪ್ರಾಯೋಗಿಕವಾದ ದಾಖಲೆಗಳನ್ನಷ್ಟೆ ಪರಿಗಣಿಸಿ ಜನರಿಗೆ ಅಲೆದಾಡಿಸದೆ ಇ-ಆಸ್ತಿ ಖಾತೆ ಮಾಡಿಕೊಡಲು ಸೂಚನೆ ನೀಡಿದರು. ಜನರು ಆಸ್ತಿ ತೆರಿಗೆ ಕಟ್ಟಿ ಇ-ಆಸ್ತಿ ದಾಖಲೆ ಪಡೆಯುವುದರಿಂದ ಪರೋಕ್ಷವಾಗಿ ಪಾಲಿಕೆಗೆ ಆದಾಯವು ಬರಲಿದ್ದು ನೀರಿನ ಶುಲ್ಕ ವಸೂಲಿಯಾಗುತ್ತದೆ.