ಬಜೆಟ್ ನಲ್ಲಿ ಶಿಕ್ಷಣದ ಪ್ರಮುಖ ಸಮಸ್ಯೆ ನಿವಾರಣೆಗೆ ಸರ್ಕಾರ ಗಮನಹರಿಸಿ: ಚಂದ್ರಕಲಾ
Feb 14 2024, 02:17 AM ISTಕಳೆದ ಸರ್ಕಾರ ಅಪ್ರಜಾತಾಂತ್ರಿಕವಾಗಿ ರಾಜ್ಯದಲ್ಲಿ ಹೇರಿದ ಎನ್ಇಪಿ- 2020ರ ಎಲ್ಲಾ ಶಿಫಾರಸುಗಳನ್ನು ಹಿಂಪಡೆಯಬೇಕು. ಕಟ್ಟಡ ಕಾರ್ಮಿಕರ ಮಕ್ಕಳ ಶಿಷ್ಯವೇತನದ ಹಿಂದಿನ ಮೊತ್ತವನ್ನೇ ಮುಂದುವರೆಸಬೇಕು. ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನದ ಹಣವನ್ನು ಅವರ ಬ್ಯಾಂಕ್ ಖಾತೆಗೆ ಹಾಕುವ (ಡಿಬಿಟಿ) ಪದ್ಧತಿಯನ್ನು ಹಿಂಪಡೆಯಿರಿ. ರಾಜ್ಯದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳ ಸಂಖ್ಯೆಯನ್ನು ಹೆಚ್ಚಿಸಬೇಕು.