ಕನ್ನಡ ನಾಡು ಉಳಿವಿಗೆ ಕನ್ನಡ ಸಾಹಿತ್ಯ ಪರಿಷತ್ ನಿರಂತರ ಶ್ರಮ: ಡಾ.ಮೀರಾ ಶಿವಲಿಂಗಯ್ಯ
May 06 2024, 12:32 AM ISTಪ್ರಸ್ತುತ ದಿನಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ವಿಶ್ವಮಟ್ಟದಲ್ಲೂ ಪಸರಿಸಿಕೊಂಡಿದೆ. ಕನ್ನಡ ಸಾಕ್ಷಿ ಪ್ರಜ್ಞೆಯಾಗಿ ಕಾರ್ಯ ನಿರ್ವಹಿಸುತ್ತಿದೆ. ಗ್ರಾಮ ಮಟ್ಟದವರೆಗೂ ವಿಸ್ತರಿಸಿ ನಾಡು-ನುಡಿ ಉಳಿಸಲು ಹೋರಾಟ ಮಾಡುತ್ತಿದೆ. ಕನ್ನಡದ ತೇರು ಎಳೆಯಲು, ಕನ್ನಡ ಭಾಷಿಕರನ್ನು ಒಗ್ಗೂಡಿಸುವ ಕೆಲಸ ಕಸಾಪ ಮಾಡಿಕೊಂಡು ಬಂದಿರುವುದು ಶ್ಲಾಘನೀಯ. ಪರಿಷತ್ ಬೆಳೆದು ಬಂದ ಹಾದಿ ತಿಳಿಯುವುದು ಅನಿವಾರ್ಯವಾಗಿದೆ.