ಸ್ಫೋಟ ದುರಂತದ ಹೆಚ್ಚಿನ ಮಾಹಿತಿ ನಿರೀಕ್ಷೆ: ದಿನೇಶ್ ಗುಂಡೂರಾವ್
Jan 30 2024, 02:01 AM ISTಪಟಾಕಿ ತಯಾರಿಸುವ ಘಟಕವು 14.12.2011ರಂದು ಪರವಾನಗಿ ಪಡೆದಿರುವುದಾಗಿ ಅಧಿಕಾರಿಗಳ ಪರಿಶೀಲನೆ ವೇಳೆ ತಿಳಿದುಬಂದಿದ್ದು, 31.3.2024ರವರೆಗೆ ನವೀಕರಿಸಲಾಗಿದೆ. ದುರಂತದಲ್ಲಿ ಮೂವರು ಮೃತಪಟ್ಟಿದ್ದು, ಅವರಲ್ಲಿ ನಾರಾಯಣನ್ ಅಲಿಯಾಸ್ ಕುಂಞ ಎಂಬವರ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಉಳಿದಿಬ್ಬರ ದೇಹದ ಅಂಗಾಂಗಗಳು ಪತ್ತೆಯಾಗಿದ್ದು, ಅವುಗಳನ್ನು ಗುರುತಿಸಲು ಡಿಎನ್‌ಎ ಪರೀಕ್ಷೆಗೆ ರವಾನಿಸಲಾಗಿದೆ ಎಂದು ದಿನೇಶ್ ಗುಂಡೂರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.