ರೈತ, ಸೈನಿಕ ಜಗತ್ತಿನ ಎರಡು ಕಣ್ಣುಗಳು: ಶಿವಪ್ರಕಾಶ ಸ್ವಾಮೀಜಿ
Jul 31 2024, 01:00 AM ISTಕನ್ನಡಪ್ರಭವಾರ್ತೆ ಬಸವನಬಾಗೇವಾಡಿ ಜಗತ್ತಿಗೆ ಅನ್ನ ನೀಡುವ ರೈತ, ಗಡಿ ಕಾಯುವ ಸೈನಿಕ ಎರಡು ಕಣ್ಣುಗಳಿದ್ದಂತೆ. ಇವರು ಇಲ್ಲದಿದ್ದರೆ ಜನರು ನೆಮ್ಮದಿಯಿಂದಿರಲು ಸಾಧ್ಯವಿಲ್ಲ ಎಂದು ಹಿರೇಮಠದ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ಪಟ್ಟಣದ ಬಸವ ಭವನದಲ್ಲಿ ಪುರಸಭೆ, ಮಾಜಿ ಸೈನಿಕ ಹಾಗೂ ಅರೆಸೈನಿಕ ಸಂಘದ ಸಹಯೋಗದಲ್ಲಿ ಕಾರ್ಗಿಲ್ ವಿಜಯದ ರಜತ ಮಹೋತ್ಸವದಲ್ಲಿ ಮಾತನಾಡಿದ ಅವರು, ರೈತ ಬಿತ್ತದಿದ್ದರೆ ಅನ್ನ ಸಿಗುವುದಿಲ್ಲ.ಸೈನಿಕ ಗಡಿ ಕಾಯದೇ ಹೋದರೆ ನೆಮ್ಮದಿ ಇರುವುದಿಲ್ಲ ಎಂದು ಹೇಳಿದರು.