• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಹಾಸನಾಂಬೆ ದರ್ಶನ: ರಸ್ತೆಗಳಲ್ಲಿ ವಾಹನ ನಿರ್ಬಂಧ, ಬ್ರಹ್ಮಾಂಡ ಗುರೂಜಿ ಹಾಸನಾಂಬೆ ದರ್ಶನ

Oct 26 2024, 12:47 AM IST
ಹಾಸನಾಂಬ ದೇವಿಯ ದರ್ಶನಕ್ಕಾಗಿ ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಿಂದ ಅಪಾರ ಪ್ರಮಾಣದಲ್ಲಿ ಭಕ್ತಾದಿಗಳು ವಾಹನಗಳಲ್ಲಿ ಆಗಮಿಸುವುದರಿಂದ ಹಾಸನ ನಗರದಲ್ಲಿ ವಾಹನ ದಟ್ಟಣೆ ಉಂಟಾಗುವುದನ್ನು ತಪ್ಪಿಸಲು ಕೆಲವು ರಸ್ತೆಗಳಲ್ಲಿ ವಾಹನ ಸಂಚಾರವನ್ನು ಜಿಲ್ಲಾಡಳಿತ ನಿರ್ಬಂಧಿಸಿದೆ.

ಹಾಸನಾಂಬೆ ದೇವಿ ದರ್ಶನ ಪಡೆದ ಶಾಸಕ ಮಧು ಜಿಮಾದೇಗೌಡರ ಕುಟುಂಬ

Oct 26 2024, 12:45 AM IST
ಹಾಸನ ಜಿಲ್ಲಾಡಳಿತದಿಂದ ವಿಶೇಷ ದರ್ಶನಕ್ಕೆ ಅನುವು ಮಾಡಿಕೊಟ್ಟ ಹಿನ್ನೆಲೆಯಲ್ಲಿ ಹಾಸನಾಂಬೆ ದೇವಿ ಗರ್ಭಗುಡಿಗೆ ತೆರಳಿ ಕುಟುಂಬ ಸಮೇತವಾಗಿ ಪೂಜೆ ಸಲ್ಲಿಸಿದರು. ನಂತರ ದೇವಾಲಯದ ವತಿಯಿಂದ ಶಾಸಕ ಮಧು ಜಿ.ಮಾದೇಗೌಡರನ್ನು ಅಭಿನಂದಿಸಿ ಗೌರವಿಸಿದರು.

ನಾಳೆ ಬಾಗಿಲು ತೆರೆಯಲಿರುವ ಹಾಸನಾಂಬೆ ದೇಗುಲ

Oct 24 2024, 12:49 AM IST
ಅಕ್ಟೋಬರ್ ೨೪ರ ಗುರುವಾರದಂದು ಮಧ್ಯಾಹ್ನ ೧೨ ಗಂಟೆಗೆ ರಾಜ ಮನೆತನದ ನರಸಿಂಹ ರಾಜ ಅರಸು ಅವರು ಬಾಳೆಕಂದು ಕತ್ತರಿಸಿದ ನಂತರ ದೇವಿಯ ಗರ್ಭಗುಡಿಗೆ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿ ಬಾಗಿಲನ್ನು ತೆಗೆದು ದರ್ಶನ ಆರಂಭವಾಗಿ ನವೆಂಬರ್ ೩ನೇ ತಾರೀಖು ಮುಚ್ಚಲಾಗುತ್ತದೆ. ಬ್ಯಾರಿಕೇಡ್, ನೆಲಹಾಸು, ಜರ್ಮನ್ ಟೆಂಟ್, ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಎಲ್ಲಾ ರೀತಿಯ ಮೂಲಭೂತ ಸೌಕರ್ಯವನ್ನು ಕಲ್ಪಿಸಲಾಗಿದೆ. ಒಂದು ಸಾವಿರ ಮತ್ತು ೩೦೦ ರು.ಗಳ ಟಿಕೆಟ್ ಪಡೆಯಲು ಪ್ರತ್ಯೇಕ ಕೌಂಟರ್ ವ್ಯವಸ್ಥೆ, ಲಾಡು ಪಡೆಯಲು ಪತ್ಯೇಕ ಕೇಂದ್ರ ಸ್ಥಾಪಿಸಲಾಗಿದೆ.

ಹಾಸನಾಂಬೆ ದರ್ಶನಕ್ಕೆ ದಿನಗಣನೆ ಆರಂಭ

Oct 22 2024, 12:05 AM IST
ಅಕ್ಟೋಬರ್ ೨೪ರಂದು ಹಾಸನಾಂಬ ದೇವಸ್ಥಾನದ ಬಾಗಿಲು ತೆರೆಯಲಾಗುವುದು. ನವಂಬರ್ ೩ರವರೆಗೂ ಜಾತ್ರಾ ಮಹೋತ್ಸವ ಜರುಗಲಿದೆ. ನ.೩ರ ಮಧ್ಯಾಹ್ನ ೧೨ ಗಂಟೆಗೆ ದೇವಾಲಯದ ಬಾಗಿಲನ್ನು ಶಾಸ್ತ್ರೋಕ್ತವಾಗಿ ಮುಚ್ಚಲಾಗುವುದು. ಒಟ್ಟು ೧೧ ದಿನದಲ್ಲಿ ೯ ದಿನ ಮಾತ್ರ ಸಾರ್ವಜನಿಕರಿಗೆ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದ್ದರಿಂದ ಕಡಿಮೆ ಸಮಯದಲ್ಲಿ ಹೆಚ್ಚು ಜನ ಬರುವ ನಿರೀಕ್ಷೆಯಿದ್ದು, ಸುಮಾರು ೨೦ ಲಕ್ಷ ಭಕ್ತರ ಆಗಮನದ ನಿರೀಕ್ಷೆ ಹೊಂದಲಾಗಿದೆ ಎಂದು ಸಚಿವರು ಹೇಳಿದರು.

ಹಾಸನಾಂಬೆ ದೇವಿ ಜಾತ್ರಾ ಮಹೋತ್ಸವ ದರ್ಶನ ಅಭಿಯಾನ

Oct 17 2024, 12:05 AM IST
ಹಾಸನಾಂಬೆ ದೇವಿ ಜಾತ್ರಾ ಸಮಯದಲ್ಲಿ ಭಕ್ತಾದಿಗಳು ಸಾಂಪ್ರದಾಯಿಕ (ದೇಶೀಯ) ವಸ್ತ್ರ ಸಂಹಿತೆ ವೇಷಭೂಷಣಗಳಲ್ಲಿ (ಹಣೆಯಲ್ಲಿ ಕುಂಕುಮ, ಚಂದನ, ವಿಭೂತಿ, ನಾಮ ಇತ್ಯಾದಿ ಇಟ್ಟು) ದರ್ಶನ ಮಾಡಲು ಪ್ರೇರೇಪಿಸುವ ಅಭಿಯಾನ (ಜನಜಾಗೃತಿ) ಶ್ರೀ ಹಾಸನಾಂಬೆ ದೇವಾಲಯದ ಮುಂಭಾಗ ಚಾಲನೆ ನೀಡಲಾಯಿತು. ದೇವಿಯ ದರ್ಶನಕ್ಕೆ ಆಗಮಿಸುವ ಭಕ್ತರು ವಸ್ತ್ರಸಂಹಿತೆಯನ್ನು ಪಾಲಿಸಿ ಹಾಗೂ ಹಣೆಯಲ್ಲಿ ಕುಂಕುಮ ಚಂದನ ಅಥವಾ ವಿಭೂತಿ ಇತ್ಯಾದಿಗಳನ್ನು ಧರಿಸಿ ದರ್ಶನಕ್ಕೆ ಆಗಮಿಸಲು ವಿನಂತಿಸಿದರು.

ಹಾಸನಾಂಬೆ ಉತ್ಸವಕ್ಕೆ ವಿಶೇಷ ಅನುದಾನ ಬಿಡುಗಡೆಗೆ ಒತ್ತಾಯ

Sep 10 2024, 01:41 AM IST
ಜೋರು ಮಳೆಯಿಂದ ರಸ್ತೆಗಳು ಹಾಳಾಗಿವೆ. ಇವುಗಳನ್ನು ದುರಸ್ತಿ ಮಾಡಬೇಕಿದೆ. ಸರ್ಕಾರಿ ಕಚೇರಿಗಳಿಗೆ ಸುಣ್ಣ ಬಣ್ಣ ಬಳಿದು ಹೊಸ ರೂಪ ನೀಡಬೇಕಿದೆ. ನಗರದ ಸೌಂದರ್ಯ ಹೆಚ್ಚಿಸುವ ಕೆಲಸ ಆಗಬೇಕಿದೆ. ಅದಕ್ಕಾಗಿ ಕನಿಷ್ಠ 50 ಕೋಟಿ ವಿಶೇಷ ಅನುದಾನ ಬಿಡುಗಡೆ ಮಾಡಬೇಕೆಂದು ಜಿಲ್ಲಾ ಜೆಡಿಎಸ್ ವಕ್ತಾರ ರಘು ಹೊಂಗೆರೆ ಒತ್ತಾಯಿಸಿದ್ದಾರೆ. ಹಾಸನ ನಗರದಲ್ಲಿ ಜರುಗುವ ನಗರದ ಅಧಿದೇವತೆ ಹಾಸನಾಂಬೆ ಜಾತ್ರಾ ಮಹೋತ್ಸವಕ್ಕೂ ವಿಶೇಷ ಅನುದಾನ ಬಿಡುಗಡೆ ಮಾಡಬೇಕು ಎಂದರು.

ಅಕ್ಟೋಬರ್ ೨೪ರಿಂದ ಹಾಸನಾಂಬೆ ದರ್ಶನ

Aug 14 2024, 12:47 AM IST
ಈ ವರ್ಷ ಹಾಸನಾಂಬೆ ಜಾತ್ರೋತ್ಸವವನ್ನು ಅದ್ಧೂರಿಯಾಗಿ ನಡೆಸಲು ತೀರ್ಮಾನಿಸಲಾಗಿದೆ. ಈ ಬಾರಿ ೧೧ ದಿನ ಹಾಸನಾಂಬ ಬಾಗಿಲು ತೆಗೆಯಲಿದೆ, ಆದರೆ ಭಕ್ತಾದಿಗಳಿಗೆ ಮೊದಲ ದಿನ ಮತ್ತು ಕೊನೆಯ ದಿವಸದಂದು ದರ್ಶನಕ್ಕೆ ಅವಕಾಶ ಇರುವುದಿಲ್ಲ. ೯ ದಿನಗಳ ಕಾಲ ಸಾರ್ವಜನಿಕರಿಗೆ ದೇವಿ ದರ್ಶನ ಮಾಡಲು ಅವಕಾಶ ಕಲ್ಪಿಸಲಾಗುವುದು. ಹಾಸನಾಂಬ ಜಾತ್ರೋತ್ಸವದ ಅಂಗವಾಗಿ ದೇವಾಲಯದ ಬಾಗಿಲನ್ನು ಅಕ್ಟೋಬರ್ ೨೪ರಿಂದ ತೆಗೆಯಲಿದ್ದು, ಕಳೆದ ವರ್ಷಕ್ಕಿಂತ ಈ ವರ್ಷ ಇನ್ನಷ್ಟು ಉತ್ತಮವಾಗಿ ನಡೆಸಲು ಹಾಗೂ ಭಕ್ತಾದಿಗಳ ದರ್ಶನಕ್ಕೆ ಅಡಚಣೆ ಆಗದಂತೆ ಎಲ್ಲಾ ರೀತಿಯ ಸಕಲ ಸಿದ್ಧತೆ ಮಾಡಿಕೊಳ್ಳುವಂತೆ ಸಂಸದರಾದ ಶ್ರೇಯಸ್ ಎಂ. ಪಟೇಲ್ ಸಭೆಯಲ್ಲಿ ತಿಳಿಸಿದರು.

ಹಾಸನಾಂಬೆ ದರ್ಶನ ಮಾಡಿದ ಅಬಕಾರಿ ಸಚಿವ ತಿಮ್ಲಾಪೂರ ಗೇಲಿ

Nov 12 2023, 01:02 AM IST
ಅಬಕಾರಿ ಸಚಿವ ಆರ್.ಬಿ. ತಿಮ್ಲಾಪೂರ ಶನಿವಾರ ಕುಟುಂಬ ಸಮೇತರಾಗಿ ಬಂದು ಹಾಸನಾಂಬೆ ದೇವಿ ದರ್ಶನ ಪಡೆದರು.

ಹಾಸನಾಂಬೆ ದೇವಾಲಯ ಸುತ್ತಲಿನ ನಿವಾಸಿಗಳ ಪರದಾಟ

Nov 05 2023, 01:15 AM IST
ಹಾಸನಾಂಬೆ ದೇವಾಲಯದ ಸುತ್ತ ಬ್ಯಾರಿಕೇಡ್‌ ಹಾಕಿ ಯಾರು ಓಡಾಡದಂತೆ ಮಾಡಲಾಗಿದೆ. ಇದರಿಂದಾಗಿ ಇಲ್ಲಿನ ನಿವಾಸಿಗಳಿಗೆ ಮನೆಗೆ ಹೋಗಲಿಕ್ಕೂ ಕೂಡ ಪೊಲೀಸರು ಅವಕಾಶ ನೀಡುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ಉತ್ಸವ ಮುಗಿಯುವವರೆಗೆ ಎಲ್ಲಾದರೂ ಹೋಗಿ ಎನ್ನುತ್ತಿದ್ದಾರೆ ಎಂದು ಅಲ್ಲಿನ ನಿವಾಸಿಗಳು ತಮ್ಮ ಅಳಲು ತೋಡಿಕೊಂಡರು

ದರ್ಶನ ಭಾಗ್ಯ ಕಲ್ಪಿಸಿದ ಹಾಸನಾಂಬೆ

Nov 03 2023, 12:30 AM IST
ಜಿಲ್ಲೆಯ ಅಧಿದೇವತೆ ಶ್ರೀ ಹಾಸನಾಂಬ ದೇವಿಯ ದರ್ಶನ ಗುರುವಾರದಿಂದ ಆರಂಭವಾಗಿದ್ದು, ಆದಿಚುಂಚನಗಿರಿ ಶ್ರೀಗಳಾದ ನಿರ್ಮಲಾನಂದನಾಥ ಸ್ವಾಮೀಜಿಗಳ ಸಮ್ಮುಖದಲ್ಲಿ ವಿದ್ಯುಕ್ತವಾಗಿ ಧಾರ್ಮಿಕ ವಿಧಿವಿಧಾನಗಳ‌‌ ಮೂಲಕ ಗುರುವಾರ ಸರಿಸುಮಾರು 12.25ಕ್ಕೆ ಬಾಗಿಲು ತೆರೆಯಲಾಯಿತು.
  • < previous
  • 1
  • 2
  • 3
  • next >

More Trending News

Top Stories
ದೈವಗಳನ್ನು ಅನುಕರಣೆ ಮಾಡಬೇಡಿ : ಕಾಂತಾರ 1 ಚಿತ್ರತಂಡದಿಂದ ಪ್ರೇಕ್ಷಕರಲ್ಲಿ ಮನವಿ
ಧರ್ಮ ಒಡೆದರೆ ನಿಮ್ಮ ಸಿಎಂ ಸ್ಥಾನ ಉಳಿಯಲ್ಲ : ಡಾ. ನೀಲಕಂಠ ಶ್ರೀ
ಜಾತಿ ಗಣತಿ 83% ಪೂರ್ಣ ; ನಿನ್ನೆಯೇ ಮುಗಿಯಬೇಕಿದ್ದ ಸಮೀಕ್ಷೆ ವಿಸ್ತರಣೆ
ವಿಚ್ಛೇದನ ಆಗಿದ್ದರೂ ಪುತ್ರಿಯ ಪೋಷಣೆ ತಂದೆ ಕರ್ತವ್ಯ
ತೀವ್ರ ಚಳಿ, ಜ್ವರ : ದೇವೇಗೌಡ ಆಸ್ಪತ್ರೆಗೆ, ಐಸಿಯುನಲ್ಲಿ ಚಿಕಿತ್ಸೆ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved