ವಿಪ್ರರು ಧರ್ಮ ಹಿಂದೂ, ಜಾತಿ ಬ್ರಾಹ್ಮಣ ಬರೆಸಿ: ವೆಂಕಟೇಶ್ ರಾವ್
Sep 25 2025, 01:00 AM ISTರಾಜ್ಯ ಸರ್ಕಾರವು ಆರಂಭಿಸಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ವಿಪ್ರ ಬಾಂಧವರು ಧರ್ಮದ ಕಾಲಂ 1ರಲ್ಲಿ ಹಿಂದೂ ಎಂದೂ, ಜಾತಿ ಕಾಲಂ 218ರಲ್ಲಿ ಹಿಂದೂ ಬ್ರಾಹ್ಮಣ ಎಂತಲೂ ಬರೆಸಬೇಕು. ಉಪ ಜಾತಿ ಕಾಲಂನಲ್ಲಿ ಏನೂ ಬರೆಯುವ ಅವಶ್ಯಕತೆ ಇಲ್ಲ ಎಂದು ಬ್ರಾಹ್ಮಿನ್ ಆರ್ಗನೈಸೇಷನ್ ಆಫ್ ಇಂಡಿಯಾದ ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟೇಶ್ ರಾವ್ ತಿಳಿಸಿದರು.